Site icon Suddi Belthangady

ಎಸ್ ಡಿ ಯಂ ಪಾಲಿಟೆಕ್ನಿಕ್ – ಸಂಚಾರಿ ನಿಯಮಗಳ ಮಾಹಿತಿ

ಉಜಿರೆ : ಉಜಿರೆಯ ಎಸ್ ಡಿ ಯಂ ಪಾಲಿಟೆಕ್ನಿಕ್ ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಹಯೋಗದಲ್ಲಿ ವಿಶ್ವ ಅರೋಗ್ಯ ದಿನದ ಪ್ರಯುಕ್ತ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ದಿನಾಂಕ 11-04-2023 ರಂದು ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀ ಸಂತೋಷ್ ಅವರು ಮೋಟಾರ್ ವಾಹನ ಚಾಲನೆಯ ನಿಯಮಗಳು, ಚಾಲನಾ ಪರವನಾಗಿ, ಹೆಲ್ಮೆಟ್, ಸೀಟ್ ಬೆಲ್ಟ್ ಹಾಗೂ ಸುರಕ್ಷತೆಯ ಕುರಿತಾಗಿ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸಂತೋಷ್, ವೈ.ಆರ್.ಸಿ ಕಾರ್ಯಕ್ರಮಾಧಿಕಾರಿ ಅವನೀಶ್.ಪಿ, ಎನ್.ಯಸ್.ಯಸ್ ಕಾರ್ಯಕ್ರಮಾಧಿಕಾರಿ ಅಶ್ವಿನ್ ಮರಾಠೆ ಉಪಸ್ಥಿತರಿದ್ದರು. ಚಿರಂತನ್ ಭಟ್ ಸ್ವಾಗತಿಸಿ, ಸ್ಪೂರ್ತಿ ವಂದಿಸಿದಳು. ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು.

Exit mobile version