Site icon Suddi Belthangady

ಎಲ್‌ಐಸಿ ಬೆಳ್ತಂಗಡಿ ಉಪಗ್ರಹ ಶಾಖೆ ಆರ್ಥಿಕ ವರ್ಷದಲ್ಲಿ ರೂ.7.51 ಕೋಟಿ ಪ್ರಥಮ ಪ್ರೀಮಿಯಂ ಸಂಗ್ರಹ

ಬೆಳ್ತಂಗಡಿ: ಭಾರತೀಯ ಜೀವ ನಿಗಮ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖೆಯ 2022-23 ನೇ ಸಾಲಿನಲ್ಲಿ ಉತ್ತಮ ಹೊಸ ವ್ಯವಹಾರದೊಂದಿಗೆ ರೂ.7.51 ಕೋಟಿ ಪ್ರಥಮ ಪ್ರೀಮಿಯಂ ಸಂಗ್ರಹಿಸಿ ಒಟ್ಟು 4875 ಹೊಸ ಪಾಲಿಸಿ ದಾಖಲಾಗಿದೆ.ಆರ್ಥಿಕ ವರ್ಷದಲ್ಲಿ ಈ ಶಾಖೆಯಿಂದ 5 ಮಂದಿ ಪ್ರತಿನಿಧಿಗಳು ಎಂಡಿಆರ್‌ಟಿ ಯಾಗಿ ಹೊರಹೊಮ್ಮಿದ್ದಾರೆ. ಒಟ್ಟು 13 ಮಂದಿ ಪ್ರತಿನಿಧಿಗಳು ಶತಕ ವೀರರಾಗಿ ಸಾಧನೆ ಗೈದಿದ್ದಾರೆ.

ವಿನ್ಸ್ಸೆಂಟ್ ಡಿಸೋಜ, ಜೆರಾಲ್ ಕೊರೆಯಾ, ಪುಷ್ಪರಾಜ್ ಹೆಗ್ಡೆ, ಜಗನ್ನಾಥ ಹೆಗ್ಡೆ,ಎ. ಎಸ್. ಲೋಕೇಶ್ ಶೆಟ್ಟಿ 5 ಮಂದಿ ಪ್ರತಿನಿಧಿಗಳು ಎಂ.ಡಿ.ಆರ್.ಟಿ ಯಾಗಿದ್ದಾರೆ.ಶತಕ ವೀರರಾಗಿ ಪುಷ್ಪರಾಜ ಹೆಗ್ಡೆ (414), ರಾಜೇಶ್ ಕುಮಾರ್, ಎ.ಎಸ್ ಲೋಕೇಶ್ ಶೆಟ್ಟಿ, ಜಗನ್ನಾಥ್‌ ಹೆಚ್, ಜೆರಾಲ್ಡ್ ಕೊರೆಯಾ, ಕುಶಾಲಪ್ಪ ಗೌಡ, ರುಡಾಲ್ಫ್ ಲೋಬೋ, ಫೇಡ್ರಿಕ್ ರೋಡ್ರಿಗಸ್, ಲೋಲಾಕ್ಷಿ ಕೆ.ಆರ್, ರಾಜೇಶ್ ಪೂಜಾರಿ, ದೀಪಿಕಾ ರಾವ್, ಜಾನ್ ಒಸ್ವಾ ಲ್ಡ್ ಪಿಂಟೋ, ಯೋಗೀಶ್ ಎಂ,ಹಾಗೂ ಪೂರ್ಣಿಮಾ ನಾಯಕ್, ರೂ.62 ಲಕ್ಷ, ನಿಶಾಂತ್ ಕುಮಾರ್ ರೂ.59 ಲಕ್ಷ ಪ್ರಥಮ ಪ್ರೀಮಿಯಂ ಸಂಗ್ರಹದ ಮೂಲಕ ಇವರುಗಳು ವ್ಯವಹಾರಗಳೊಂದಿಗೆ ಈ ದಾಖಲೆ ಮಾಡಿದ್ದಾರೆಂದು ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ವಿ.ಎಸ್. ಕುಮಾರ್ ತಿಳಿಸಿದ್ದಾರೆ.

Exit mobile version