Site icon Suddi Belthangady

ಬಳಂಜ ಬದಿನಡೆ ಕ್ಷೇತ್ರಕ್ಕೆ ಶ್ರೀ ಸಾಯಿ ಗುರೂಜಿ ಭೇಟಿ

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮ ಲಿಂಗೇಶ್ವರ ದೇವಸ್ಥಾನ ಬದಿನಡೆ ಬಳಂಜ ಇಲ್ಲಿಗೆ ಉಡುಪಿ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ಶ್ರೀ ಸಾಯಿ ಗುರೂಜಿಯವರು ಭೇಟಿ ನೀಡಿ ದೇವರ ದರ್ಶನ ಪಡೆದು ಫಲ್ಗುಣಿ ನದಿ ತೀರದಲ್ಲಿರುವ ಸುಂದರ ದೇವಸ್ಥಾನದ ಕೆಲಸ ಕಾರ್ಯಗಳ ಮೆಚ್ಚುಗೆ ವ್ಯಕ್ತಪಡಿಸಿದರು.


ಕ್ಷೇತ್ರದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ಮತ್ತು ಮಂಜುಳಾ ದಂಪತಿಗಳು ಗುರುಜಿಯವರನ್ನು ಸ್ವಾಗತಿಸಿದರು.ದೇವಸ್ಥಾನದ ಪ್ರದಾನ ಅರ್ಚಕರಾದ ಹರೀಶ್ ಭಟ್, ರಾಜೇಂದ್ರ ಶೆಟ್ಟಿ ಕುರೆಲ್ಯ, ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಶ್ರೀ ಸಾಯಿ ಗುರುಜಿಯವರು ಉಡುಪಿಯಲ್ಲಿ ಆಧ್ಯಾತ್ಮಿಕ ಸಾಧನೆ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Exit mobile version