ವೇಣೂರು: 2023ರ ಸಾಲಿನ ದಿ|ಬಾಬು ಕುಡ್ತಡ್ಕ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ವಸ್ತಿಕ್ ಕಲಾಕೇಂದ್ರ (ರಿ.) ಜಲ್ಲಿಗುಡ್ಡೆ ಮಂಗಳೂರು ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಪಡೀಲ್ ಇದರ ಆಶ್ರಯದಲ್ಲಿ ಸಮುದಾಯದ ಹಿರಿಯ ಪ್ರಸಿದ್ಧ ಧೀಮಂತ ಕಲಾವಿದರಾಗಿದ್ದ ದಿ. ಬಾಬು ಕುಡ್ತಡ್ಕ ಅವರ ಸವಿನೆನಪಿಗೆ ಪ್ರತೀ ವರ್ಷ ಕಲಾಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿದೆ.
ಅ.೮ರಂದು ಮಂಗಳೂರು ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ.ಕಳೆದ 25 ವರ್ಷಗಳಿಂದ ಅರೋಗ್ಯ, ಶಿಕ್ಷಣ, ಸಾಹಿತ್ಯ, ಕಲೆ, ಧಾರ್ಮಿಕ, ಸಂಸ್ಕೃತಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಡಾ.ಅಣ್ಣಯ್ಯ ಕುಲಾಲ್ ಅವರ ನೇತೃತ್ವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಕಳೆದ 15 ವರ್ಷಗಳಳಿಂದ ಕಾಸರಗೋಡು ಸಹಿತ ಅವಿಬಜಿತ ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಥೆಗಾರ, ಯುವ ಸಾಹಿತಿ, ಯುವ ಕವಿ ಸ್ಪರ್ಧೆ ಹಾಗೂ ಪ್ರಶಸ್ತಿ ಕೊಡುತ್ತಾ ಇದ್ದು, ಕಳೆದೆರಡು ವರ್ಷದಿಂದ ದಿ.ಅರಸು ಪ್ರಶಸ್ತಿ, ಸರ್ವಜ್ಞ ರಾಜ್ಯ ಪ್ರಶಸ್ತಿ ಜೊತೆ ದಿ| ಬಾಬು ಕುಡ್ತಡ್ಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಹಭಾಗಿತ್ವ ನೀಡುತ್ತಿದೆ.