Site icon Suddi Belthangady

ಗೇರುಕಟ್ಟೆ: ಸಿ ಆರ್ ಪಿ ಎಫ್ ಸಿಬ್ಬಂದಿಗಳ ಪಥ ಸಂಚಲನ

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆಯಿಂದ ನಾಳ ದೇವಸ್ಥಾನದವರೆಗೆ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಎ.10ರಂದುಸಿಆರ್ ಪಿ ಎಫ್ ಪಡೆ ಪಥ ಸಂಚಲನ ನಡೆಯಿತು.


ಬೆಳ್ತಂಗಡಿ ತಾಲೂಕಿನ ವೃತ ನೀರಿಕ್ಷಕರಾದ ಶಿವಕುಮಾರ್ ನೇತೃತ್ವದಲ್ಲಿ ಸಿ ಆರ್ ಪಿ ಎಫ್ ಪುರುಷ ಮತ್ತು ಮಹಿಳಾ ಸಿಬ್ಬಂದಿಯ ಪಥ ಸಂಚಲನ ಶಿಸ್ತು ಬದ್ಧವಾಗಿ ಜರುಗಿತು.ಪೇಟೆಯ ವರ್ತಕರು, ವಾಹನ ಚಾಲಕರು ಮತ್ತು ಸಾರ್ವಜನಿಕರು ಪಥ ಸಂಚಲನ ವೀಕ್ಷಿಸಿದರು.ನಾಳ ಶಾಲಾ ಮೈದಾನದಲ್ಲಿ ಪಥ ಸಂಚಲನ ಪೂರ್ಣಗೊಳಿಸಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ಠಾಣಾ ಪೊಲೀಸ್ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Exit mobile version