ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್.ಡಿ.ಪಿ.ಆರ್. ತಾಲೂಕು ಘಟಕ ಮೂಡುಬಿದ್ರೆ ಇದರ ಸಭೆಯು ಏ.08ರಂದು ಸಂಘದ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ್ ಬೊಲ್ಮ ಇವರ ಅಧ್ಯಕ್ಷತೆಯಲ್ಲಿ ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಿತು.
ಮೂಡಬಿದ್ರೆ ತಾಲೂಕು ಘಟಕದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಮಹಿಳಾ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಅನುಭವ ಹೊಂದಿರುವ ಶ್ರೀಮತಿ ನಯನ ದರೆಗುಡ್ಡೆ ಗ್ರಾಮ ಪಂಚಾಯತ್ ಇವರನ್ನು ಆಯ್ಕೆ ಮಾಡಲಾಯಿತು. ಸಂಘದ ಪ್ರಧಾನಕಾರ್ಯದರ್ಶಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಹೋರಾಟ ಸಮಿತಿಯ ಉಪಾಧ್ಯಕ್ಷರಾಗಿ ಅನುಭವ ಹೊಂದಿರುವ ಶ್ರೀ ಪ್ರದೀಪ್ ಕುಮಾರ್ ಇರುವೈಲ್ ಗ್ರಾಮ ಪಂಚಾಯತ್ ಇವರನ್ನು ಹಾಗೂ ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಗ್ರೇಸಿ ಪಿರೇರಾ ತೆಂಕ ಮಿಜರು ಗ್ರಾಮ ಪಂಚಾಯತ್ ಇವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳನ್ನು ಯಥಾ ಸ್ಥಿತಿ ಮುಂದುವರಿಸಲಾಯಿತು. ಮೂಡುಬಿದ್ರೆ ತಾಲೂಕು ಘಟಕದ ಸಾಧಕ ಬಾದಕಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಂಘಟನೆಯನ್ನು ಬಲಪಡಿಸುವಂತೆ ಹೊಸ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಯಿತು. ರಾಜ್ಯಮಟ್ಟದ ಹೋರಾಟಕ್ಕೆ ಸಹಕರಿಸಿದ ಎಲ್ಲಾ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ.ಆರ್ ಕುಲಾಲ್, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಪ್ರಿಯಾ ಪಿಂಟೊ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಯಶೋದರ ಬೆದ್ರ, ಮೂಡುಬಿದ್ರೆ ತಾಲೂಕು ಸಂಘದ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸಹೋದ್ಯೋಗಿಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಸಭೆಯಲ್ಲಿ ಶ್ರೀ ಯಶೋಧರ್ ಸ್ವಾಗತಿಸಿ, ಶ್ರೀ ಪ್ರದೀಪ್ ಕುಮಾರ್ ಧನ್ಯವಾದ ನೀಡಿದರು.