Site icon Suddi Belthangady

ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹರೀಶ್ ಪೂಂಜ ಭೇಟಿ-ದೈವದ ಅಭಯ

ಉರುವಾಲು:ಮಹಾಲಿಂಗೇಶ್ವರ ದೇವಸ್ಥಾನ, ತನ್ನೋಜಿ, ಹಲೇಜಿ ಉರುವಾಲು ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವದಲ್ಲಿ ಅದ್ಧೂರಿಯಾಗಿ ನಡೆಯಿತು.
ಶುಕ್ರವಾರದಂದು ರಾತ್ರಿ ದೇವಾಲಯಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪಿಲಿಚಾಮುಂಡಿ ದೈವಕ್ಕೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.‌ಹರೀಶ್ ಪೂಂಜರಿಗೆ ದೈವವೂ ಅಭಯ ನೀಡಿ ಹರಸಿದೆ.

ಈ ವೇಳೆ, ದೇವಸ್ಥಾನದ ಕಾರ್ಯಾಧ್ಯಕ್ಷರಾದ ಸುಧೀರ್ ಕುಮಾರ್, ಅನುವಂಶೀಯ ಆಡಳಿತ ಮೋಕ್ತೇಸರರಾದ ರವಿಪ್ರಸಾದ್ ಕುಂಗ್ರಿಣ್ಞಾಯ, ಅತುಲ್ ಕುಮಾರ್, ಅಣ್ಣಿಗೌಡ ಪುಷ್ಪಗಿರಿ, ಪ್ರಭಾಕರ ಗೌಡ ಪೊಸಂದೋಡಿ, ನಾಗಾರ್ಜುನ, ವಿಜಯಕುಮಾರ್ ನರ್ಸೆಪಾಲ್, ಕಿರಣ್ ಚಂದ್ರ ಪುಷ್ಪಗಿರಿ, ಮಹಾಬಲಶೆಟ್ಟಿ, ರೋಹಿತ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಸುರೇಶ್ ಹೆಚ್ ಎಲ್, ಅಜಿತ್ ಕುಮಾರ್, ಭಾಸ್ಕರ ಗೌಡ ಬಳಕದಬೆಟ್ಟು, ನಿರೂಪ್ ಆಳ್ವ, ಮುಂತಾದವರು ಉಪಸ್ಥಿತರಿದ್ದರು.

Exit mobile version