Site icon Suddi Belthangady

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಅಳದಂಗಡಿ ವಲಯ ವಾರ್ಷಿಕ ಮಹಾಸಭೆ.

ಅಳದಂಗಡಿ :ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಅಳದಂಗಡಿ ವಲಯದ ವಾರ್ಷಿಕ ಮಹಾಸಭೆಯು ಕ್ಷೇತ್ರ ಸಮಿತಿಯ ಸಹಕಾರದೊಂದಿಗೆ ಎ.4 ರಂದು ಅಳದಂಗಡಿ ನಮನ ಸಭಾಭವನದಲ್ಲಿ ವಲಯದ ಅಧ್ಯಕ್ಷ ಹರೀಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷೆ ವೇದಾವತಿ ಜನಾರ್ಧನ ಮಾತನಾಡಿ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು.ಹಾಗೂ ಹಲವು ಜನರಿಗೆ ಉಚಿತವಾಗಿ ಮಿಷಿನ್ ದೊರೆತಿರುವುದು ನಮ್ಮ ಟೈಲರ್ ಸಂಘಟನೆಯ ಶ್ರಮದಿಂದ ಎಂದು ತಿಳಿಸಿದರು.

ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಉಜಿರೆ, ಜಿಲ್ಲಾ ಸಮಿತಿ ಸದಸ್ಯರು ವಸಂತ ಬೆಳ್ತಂಗಡಿ, ರಾಜು ಪೂಜಾರಿ ಅಳದಂಗಡಿ, ವಲಯದ ಕಾರ್ಯದರ್ಶಿ ಲೆನ್ಸಿ ಡಿ ಸೋಜ ಮಾಜಿ ಅಧ್ಯಕ್ಷೆ ವಿಮಲ ಅಳದಂಗಡಿ, ನಿತ್ಯಾನಂದ ಬಳೆಂಜ, ಮೋಹನ್ ದಾಸ್ ಅಳದಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ 30 ಜನರಿಗೆ ಗುರುತಿನ ಕಾರ್ಡ್ ವಿತರಣೆ ಮಾಡಲಾಯಿತು. ಹೊಸ ಸದಸ್ಯರ ನೊಂದಾವಣೆ 15 ಹಾಗೂ ನವೀಕರಣ 32 ಮಾಡಲಾಯಿತು, ಹಾಲಿ ಅಧ್ಯಕ್ಷ ಹರೀಶ್ ಎಚ್. ಪಿ.ಟೈಲರ್ ಅಳದಂಗಡಿ, ಕಾರ್ಯದರ್ಶಿಯಾಗಿ
ಲೆನ್ಸಿ ಡಿಸೋಜಾ ಡಿಸೋಜ ಟೈಲರ್ ಅಳದಂಗಡಿ ಇವರನ್ನು ಮುಂದಿನ ಎರಡು ವರ್ಷದ ಅವಧಿಗೆ ಮರು ಆಯ್ಕೆ ಮಾಡಲಾಯಿತು, ಜೊತೆ ಕಾರ್ಯದರ್ಶಿ ನಾರಾಯಣ ಶಿರ್ಲಾಲು, ಕೋಶಾಧಿಕಾರಿಯಾಗಿ ಕುಮಾರಿ ಚಂದ್ರಿಕಾ ಬಂಗೇರ,ಸಂಘಟನಾ ಕಾರ್ಯದರ್ಶಿಗಳು , ಶಾಂತಿ ಸುಲ್ಕೇರಿಮೋಗ್ರು,ಸಂದೇಶ್ ಕೆದ್ದು,ರೇಖಾ ಶೆಟ್ಟಿ ಅಳದಂಗಡಿ ಸಕೀತ ಪಿಲ್ಯ ಹರೀಶ್ ಬಳೆಂಜ ಇವರನ್ನು ಆಯ್ಕೆ ಮಾಡಲಾಯಿತು.ಅಳದಂಗಡಿ ವಲಯದಿಂದ ತಾಲೂಕು ಸಮಿತಿಗೆ ವಿನುಷ ಪ್ರಕಾಶ್ ಅಳದಂಗಡಿ ,ಮೋಹನ್ ದಾಸ್ ಅಳದಂಗಡಿ ಜನಿತ
ಕುದ್ಯಾಡಿ, ನಿತ್ಯಾನಂದ ಬಳೆಂಜ, ರಾಜು ಪೂಜಾರಿ ಅಳದಂಗಡಿ, ಉಪಾಧ್ಯಕ್ಷರಾಗಿ ಜಗನ್ನಾಥ ಸುಲ್ಕೇರಿ ಮೋಗ್ರು , ರೇವತಿ ಸುಲ್ಕೇರಿ ಮೊಗ್ರು, ಇವರನ್ನು ಆಯ್ಕೆ ಮಾಡಲಾಯಿತು.

ಈಸಬೆಯಲ್ಲಿ ಅಳದಂಗಡಿ ವಲಯದ 60 ಮಂದಿ ಟೈಲರ್ ವೃತ್ತಿ ಬಾಂಧವರು ಭಾಗವಹಿಸಿದ್ದರು.
ಮೋಹನ್ ದಾಸ್ ನಿರೂಪಿಸಿ ರಾಜು ಪೂಜಾರಿಯವರು ಸ್ವಾಗತಿಸಿದರು, ನಿತ್ಯಾನಂದ ಬಳೆಂಜ ಇವರು ಧನ್ಯವಾದ ಸಲ್ಲಿಸಿದರು.

Exit mobile version