ಬೆಳ್ತಂಗಡಿ : ಕ್ರೈಸ್ತರಿಗೆ ಕಳೆದ ಫೆಬ್ರವರಿ ತಿಂಗಳ 22ರಿಂದ ಕಪ್ಪು ತಿಂಗಳು ಪ್ರಾರಂಭ ಗೊಂಡು ಇಂದು ಪವಿತ್ರ ಗುರುವಾರ ಆಚರಣೆ ನಡೆಯಿತು. ಏಸು ಕ್ರಿಸ್ತನ ಕೊನೆಯ ಬೋಜನ. ಧರ್ಮ ಸಬೆಯ ಸ್ಥಪಾನ ದಿನ ಆಚರಿಸಲಾಯಿತು. ಏಸು ಕ್ರಿಸ್ತ ತಮ್ಮ ಶಿಷ್ಯರ ಪಾದಗಳನ್ನು ತೊಳೆದು ಪರಸ್ಪರರ ಸೇವೆಗೆ ಮುನ್ನುಡಿ ಬರೆದ ದಿನ ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ಕೆಲ ಮುಖ್ಯಸ್ಥರ ಪಾದಗಳನ್ನು ತೊಳೆದು ಪವಿತ್ರ ಗುರುವಾರ ಸಂಭ್ರಮ ದಿಂದ ಆಚರಿಸಲಾಯಿತು. ನಂತರ ದಿವ್ಯ ಬಲಿ ಪೂಜೆ ನಡೆಯಿತು. ಪೂಜೆ ಬಳಿಕ ಏಸು ಕ್ರಿಸ್ತರು ಮರಣ ಹೊಂದುವ ದಿನ ಶುಭಶುಕ್ರವಾರಕ್ಕೆ ತಯಾರಿ, ಏಸು ಕ್ರಿಸ್ತರು ಒಬ್ಬಂಟಿಗನಾಗಿ ಜೆಸ್ಸೇ ಮಣಿ ಕಾಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಪ್ರಾರ್ಥನೆ, ಆರಾಧನೆ ನಡೆಯಿತು. ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ಪ್ರಧಾನ ದಿವ್ಯ ಬಲಿ ಪೂಜೆಯನ್ನು ವ.ಫಾ.ಜೇಮ್ಸ್ ಡಿಸೋಜಾ ಶಿಷ್ಯರ ಪಾದಗಳನ್ನು ತೊಳೆದು, ಪ್ರವಚನ ನೀಡಿದರು.ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವ. ಫಾ. ವಿಜಯ್ ಲೋಬೊ, ಉಜಿರೆ ದಯಾಳ್ ಭಾಗ್ ಆಶ್ರಮದ ಗುರುಗಳು ಉಪಸ್ಥಿತರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.