Site icon Suddi Belthangady

ಬೆಳಾಲು ಪ್ರೌಢಶಾಲೆಯಲ್ಲಿ ಸಾಹಿತ್ಯ ರಚನಾ ಕಮ್ಮಟ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ, ಉಜಿರೆ ಶ್ರೀ.ಧ.ಮ.ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದಲ್ಲಿ ಸಾಹಿತ್ಯ ರಚನಾ ಕಮ್ಮಟ ಜರಗಿತು.
ವಿವಿಧ ಕಾವ್ಯ ಪ್ರಕಾರಗಳ ರಚನೆ ಬಗ್ಗೆ ಕ್ರಿಯಾತ್ಮಕ ಆಟಗಳ ಮೂಲಕ ಪ್ರಾಯೋಗಿಕ ತರಬೇತಿ ನಡೆಯಿತು. ಅಲ್ಲದೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ, ಪತ್ರಿಕೋದ್ಯಮದಲ್ಲಿರುವ ಔದ್ಯೋಗಿಕ ಅವಕಾಶಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಉಜಿರೆ ಶ್ರೀ ಧ ಮ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆಯವರ ಮಾರ್ಗದರ್ಶನದಲ್ಲಿ ವಿಭಾಗದ ವಿದ್ಯಾರ್ಥಿಗಳು ಶಿಬಿರವನ್ನು ನಡೆಸಿಕೊಟ್ಟರು.

ಶಿಬಿರದ ಆರಂಭಕ್ಕೆ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶಿಬಿರದ ಮಾರ್ಗದರ್ಶಿ ಶಿಕ್ಷಕ ಸುಮನ್ ಯು.ಎಸ್ ಮತ್ತು ಜಗದೀಶ್.ಎನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೇ ಸಂಯೋಜಿಸಿದ ಸಭೆಯಲ್ಲಿ ವರದಿಯನ್ನು ಶ್ರವಣ್ ವಾಚಿಸಿದರೆ ಕು. ಸುಕನ್ಯಾ ಚಿಂತನೆಯನ್ನು ನಡೆಸಿದರು. ಕಾರ್ಯಕ್ರಮವನ್ನು ನಿರೂಪಿಸಿದ ಮನೋಜ್ ಸ್ವಾಗತಿಸಿ ತಿರ್ಥೇಶ್ ವಂದಿಸಿದರು.

Exit mobile version