ಬೆಳ್ತಂಗಡಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಮೊದಲ ಹಂತದಲ್ಲಿ ನಾಲ್ಕು ಸಿ.ಆರ್.ಪಿ.ಎಫ್. ತಂಡ ಆಗಮಿಸಿದೆ.
ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ಸಿ.ಆರ್.ಪಿ.ಎಫ್. ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮುಂದೆ ಇನ್ನು ಹೆಚ್ಚು ತಂಡಗಳು ಚುನಾವಣೆ ಕರ್ತವ್ಯಕ್ಕೆ ಆಗಮಿಸಲಿದೆ.
ಸಿ.ಆರ್.ಪಿ.ಎಫ್ ತಂಡ ಚುನಾವಣೆಗೆ ಸಂಬಂಧಿಸಿದಂತೆ ಏರಿಯಾ ಡೋಮಿನೇಶನ್, ಚೆಕ್ ಪೋಸ್ಟ್ ಕರ್ತವ್ಯ, ಸ್ಟ್ರಾಂಗ್ ರೂಮ್ ಭದ್ರಿಕೆ ಕರ್ತವ್ಯ, ಪ್ರಮುಖ ಸ್ಥಳಗಳಲ್ಲಿ ರೂಟ್ ಮಾರ್ಚ್ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಲಿದೆ.