ಕಲ್ಮಂಜ: ಕಲ್ಮಂಜ ಗ್ರಾಮದ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ, ನಿಡಿಗಲ್ ಇಲ್ಲಿನ ವರ್ಷಾವಧಿ ಜಾತ್ರೆ, ಸಿರಿ ಜಾತ್ರಾ ಮಹೋತ್ಸವ ವೇದಮೂರ್ತಿ ಮುಂಡೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ, ಅರ್ಚಕ ಕೃಷ್ಣಮೂರ್ತಿ ಹೊಳ್ಳ ಅವರ ಸಹಕಾರದಲ್ಲಿ ಎ.4ರಂದು ಆರಂಭಗೊಂಡಿತು.
ವೈದಿಕ ಕಾರ್ಯಕ್ರಮ, ಹೊರೆ ಕಾಣಿಕೆ ಸಮರ್ಪಣೆ, ಧ್ವಜಾರೋಹಣ, ಶ್ರೀ ದೇವರ ಬಲಿ, ಉತ್ಸವ, ದೀಪಾರಾಧನೆ, ಭೂತರಾಜ,ಮಹಿಷಂದಾಯ ಮೂರ್ತಿಲ್ಲಾಯ ದೈವಗಳ ನೇಮೋತ್ಸವ ಇತ್ಯಾದಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಜಯಂತಗೌಡ,ಸಮಿತಿ ಸದಸ್ಯರು ವಿಲಯದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇಂದು ಕುಮಾರ ದರ್ಶನ:
ಜಾತ್ರೆಯ ಎರಡನೇ ದಿನವಾದ ಇಂದು ಶತರುದ್ರಾಭಿಷೇಕ, ಉತ್ಸವ, ನಾಗತಂಬಿಲ ಸೇವೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 8 ಗಂಟೆಯಿಂದ ಕುಮಾರ ದರ್ಶನ, ಶ್ರೀದೇವರ ಉತ್ಸವ, ವಸಂತ ಕಟ್ಟೆ ಪೂಜೆ, ಅಬ್ಬಗ ದಾರಗರ ಚೆನ್ನಮಣೆ ಆಟ, ಮೂಲ ಮಹಿಷಂದಾಯ, ರಕ್ತೇಶ್ವರಿ, ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿ ದೈವಗಳ ನೇಮೋತ್ಸವ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ.