Site icon Suddi Belthangady

ಎಸ್‌ವೈಎಸ್ ಗುರುವಾಯನಕೆರೆ ಶಾಖೆಯ ವತಿಯಿಂದ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

ಬೆಳ್ತಂಗಡಿ: ಸುನ್ನೀ ಯುವಜನ ಸಂಘ(ಎಸ್‌ವೈಎಸ್) ಇದರ ಗುರುವಾಯನಕೆರೆ ಶಾಖೆಯ ವತಿಯಿಂದ ದಾನಿಗಳ ಸಹಕಾರದೊಂದಿಗೆ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ, ಆಧ್ಯಾತ್ಮಿಕ ಕಾರ್ಯಕ್ರಮ ಹಾಗೂ ಸಾಮೂಹಿಕ‌ ಇಫ್ತಾರ್ ಕೂಟ ಕಾರ್ಯಕ್ರಮ ಗುರುವಾಯನಕೆರೆ ಶಾದಿ ಮಹಲ್ ನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಎಸ್‌ವೈಎಸ್ ಯುನಿಟ್ ಅಧ್ಯಕ್ಷ, ಉದ್ಯಮಿ‌ ಹಾಜಿ ಹಸೈನಾರ್ ಶಾಫಿ ವಹಿಸಿದ್ದರು. ಸಯ್ಯಿದ್ ಸಾದಾತ್ ತಂಙಳ್ ದಾನಿಗಳಿಗೆ ದುಆ ಮಾಡಿ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪರಪ್ಪು ಮಸ್ಜಿದ್ ಖತೀಬ್ ತಾಜುದ್ದೀನ್ ಸಖಾಫಿ ಪ್ರಭಾಷಣ ನಡೆಸಿಕೊಟ್ಟರು. ನಮ್ಮ ಆದಾಯದ ಒಂದಂಶ ದಾನ ನಮ್ಮವರ ಬಡತನವನ್ನು ದೂರೀಕರಿಸಲು ಸಹಾಯವಾಗುತ್ತದೆ. ರಂಝಾನ್ ಉಪವಾಸದಿಂದ ಬಡವರ ಬಡತನ ಮತ್ತು ಹಸಿವಿನ ಅರಿವು ನಮ್ಮಲ್ಲೂ ಮೂಡಲು ಸಹಾಯಿಯಾಗುತ್ತದೆ ಎಂದರು.
ರಂಝಾನ್ ಕಿಟ್ ವಿತರಣೆಗೆ ಪೊಸೋಟು ಮಲ್ಹರ್ ಸಂಸ್ಥೆಯ ಚೇರ್ಮೆನ್ ಸಯ್ಯಿದ್ ಜಮಾಲುದ್ದೀನ್ ಅಲ್ ಬುಖಾರಿ ತಂಙಳ್ ನೇತೃತ್ವ ನೀಡಿದರು.
ಕಾರ್ಯಕ್ರಮಕ್ಕೆ ಅಶ್ರಫ್ ಆಲಿಕುಂಞಿ ಮುಂಡಾಜೆ, ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಹಮೀದ್ ಮುಸ್ಲಿಯಾರ್, ಜಮಾಅತ್ ಅಧ್ಯಕ್ಷ ಉಸ್ಮಾನ್ ಶಾಫಿ, ಮುದರ್ರಿಸ್ ಆದಂ ಅಹ್‌ಸನಿ, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಇವರು ಶುಭ ಹಾರೈಸಿದರು. ತಾಜುದ್ದೀನ್ ಸಖಾಫಿ ಪರಪ್ಪು ಧಾರ್ಮಿಕ ಉಪನ್ಯಾಸ ನೀಡಿದರು.
ಜಿ‌.ಎಸ್ ಆದಂ ಸಾಹೇಬ್, ಜಿ.ಕೆ ಉಮರ್, ಮುತ್ತಲಿಬ್, ಲೆತೀಫ್ ಹಾಜಿ ಸಲೀಂ ಕನ್ಯಾಡಿ, ಕಾಸಿಂ ಮುಸ್ಲಿಯಾರ್, ಅಬೂಬಕ್ಕರ್ ಸಮಡೈನ್, ಅಬೂಬಕ್ಕರ್ ಪೆಲತ್ತಳಿಕೆ, ಅಬೂಸ್ವಾಲಿಹ್, ನೌಶಾದ್ ಸಖಾಫಿ, ಅಶ್ರಫ್ ಗುರುವಾಯನಕೆರೆ, ಮುಹಮ್ಮದ್ ಫ್ಯಾಶನ್ ವರ್ಲ್ಡ್, ಸುಲೈಮಾನ್ ಪಾಂಡೇಶ್ವರ, ಇಸ್ಮಾಯಿಲ್, ಶರೀಫ್ ಝುಹುರಿ, ಅಬ್ದುಲ್ ರಹಿಮಾನ್ ಸಖಾಫಿ, ಉಸ್ಮಾನ್ ಮೊದಲಾದವರು ಭಾಗವಹಿಸಿದ್ದರು.
ಉಪನ್ಯಾಸ, ಕಿಟ್ ವಿತರಣೆ ಬಳಿಕ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು.

Exit mobile version