Site icon Suddi Belthangady

ಹೋಲಿ ರಿಡೀಮರ್ ಶಾಲೆಯಲ್ಲಿ ಕ್ರೀಡಾ ಶಿಬಿರ

ಹೋಲಿ ರಿಡೀಮರ್ ಶಾಲೆಯಲ್ಲಿ ಎಪ್ರಿಲ್ 3 ರಂದು ಕ್ರೀಡಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಪೂರ್ವಾಹ್ನ 9.30ಕ್ಕೆ ಸರಿಯಾಗಿ ಏರ್ಪಡಿಸಲಾಯಿತು.

ನಾಳ ಸಂತ ಅನ್ನಾರವರ ಚರ್ಚಿನ ಧರ್ಮ ಗುರುಗಳಾದ ವಂ. ಫಾ. ಥೋಮಸ್ ಸಿಕ್ವೇರಾ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳು ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿ ಭವಿಷ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಬೇಕೆಂದು ನುಡಿದು ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ. ಕ್ಲಿಫರ್ಡ್ ಪಿಂಟೋರವರು ಅತಿಥಿ ಪರಿಚಯ ಗೈದು, ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ವಾಲ್ಟರ್ ಮೋನಿಸ್ , ಚರ್ಚಿನ ಪ್ರಧಾನ ಸೇವಕ ಪ್ರೀತಮ್ ಜೋಯೆಲ್ ರೇಗೊ, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಬೊನವೆಂಚರ್ ಪಿಂಟೋ ಹಾಗೂ ತರಬೇತುದಾರರಾದ ಶ್ರೀ ಕೃಷ್ಣಾನಂದ, ಶ್ರೀ ಸುಗನ್, ಶ್ರೀ ನಾಗರಾಜ್, ಶ್ರೀ ವಿಲ್ಸನ್, ಶ್ರೀ ರಾಜೇಶ್, ಶ್ರೀ ಹರ್ಷ ಕುಮಾರ್, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ದೀಪ್ತಿ ಸ್ವಾಗತಿಸಿ, ಪ್ರಣೀತ್ ವಂದಿಸಿದರು. ರೀಶೆಲ್ ಬೆನ್ನಿಸ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶರತ್ ಪಿಂಟೋ ಸಹಕರಿಸಿದರು.

Exit mobile version