Site icon Suddi Belthangady

ತಾಲೂಕಿನಾದ್ಯಂತ ಚರ್ಚ್ ಗಳಲ್ಲಿ ಗರಿಗಳ ಭಾನುವಾರ ಆಚರಣೆ

ಬೆಳ್ತಂಗಡಿ : ಕ್ರೈಸ್ತರಿಗೆ ಕಳೆದ ಫೆಬ್ರವರಿ ತಿಂಗಳ 22ರಿಂದ ಕಪ್ಪು ತಿಂಗಳು ಪ್ರಾರಂಭಗೊಂಡು ಈ ವಾರ ಕೊನೆಗೊಳ್ಳುತ್ತದೆ. ಇಂದಿನಿಂದ ಪವಿತ್ರ ವಾರ ಪ್ರಾರಂಭಗೊಳ್ಳುತ್ತದೆ.

ಏಸು ಕ್ರಿಸ್ತರ ಜೇರುಜಲೆಂ ಪ್ರವೇಶ ಮಾಡುವ ಸಂದರ್ಭದಲ್ಲಿ ಆಲಿವ್ ಮರದ ರೆಂಬೆ ಇಡಿದು ಸ್ವಾಗತ ಮಾಡುವ ಈ ದಿನ ಅದರ ನೆನಪಿಗಾಗಿ ತೆಂಗಿನ ಗರಿಗಳನ್ನು ಹಿಡಿದು ಚರ್ಚ್ ಗಳಿಗೆ ಮೆರವಣಿಗೆ ಸಾಗಿ ಶಿಲುಬೆಯ ಹಾದಿಯಾ ವಾಚನದೊಂದಿಗೆ ಬಲಿ ಪೂಜೆ ನಡೆಯುತ್ತದೆ.

ಎಲ್ಲಾ ಚರ್ಚ್ ಗಳಲ್ಲಿ ಗರಿಗಳ ಭಾನುವಾರ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ಪ್ರಧಾನ ದಿವ್ಯ ಬಲಿ ಪೂಜೆಯನ್ನು ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ. ಫಾ. ವಿಜಯ್ ಲೋಬೊ ಅರ್ಪಿಸಿ ಪ್ರವಚನ ನೀಡಿದರು. ಪ್ರಧಾನ ಧರ್ಮ ಗುರು ವ. ಫಾ. ಜೇಮ್ಸ್ ಡಿಸೋಜ ಉಪಸ್ಥಿತರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version