Site icon Suddi Belthangady

ಉಜಿರೆ: ಶ್ರೀ ಧ. ಮ. ವಸತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾಗಿ ಸುನಿಲ್ ಪಂಡಿತ್ ಅಧಿಕಾರ ಸ್ವೀಕಾರ

ಉಜಿರೆ: ಉಜಿರೆ ಶ್ರೀ ಧ.ಮ. ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸುನಿಲ್ ಪಂಡಿತ್ ಎ.1 ರಂದು ಅಧಿಕಾರ ಸ್ವೀಕರಿಸಿದರು.

ಸುನಿಲ್ ಪಂಡಿತ್ ಎಂಎ, ಬಿಎಡ್, ಎಂಫಿಲ್ ಪದವೀಧರರಾಗಿದ್ದು ಕುವೆಂಪು ವಿಶ್ವವಿದ್ಯಾಲಯದಿಂದ ಬಿಎಡ್ ನಲ್ಲಿ ಪ್ರಥಮ ರಾಂಕ್ ಹಾಗು ಚಿನ್ನದ ಪದಕ ಪಡೆದವರು.

ಕಳೆದ 20 ವರ್ಷಗಳಿಂದ ಶ್ರೀ ಧ.ಮ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಎಚ್ ಆರ್ ಡಿ ಟ್ರೈನಿಂಗ್ ಪುರಾಣ ವಾಚನ ಪ್ರವಚನ ಇತ್ಯಾದಿಗಳಲ್ಲಿ ಆಸಕ್ತಿ ತೊಡಗಿಸಿಕೊಂಡು ಲೇಖನ ಹಾಗೂ ಅಂಕಣ ಬರಹಗಳನ್ನು ಮಾಸಪತ್ರಿಕೆ, ಹಾಗೂ ದಿನಪತ್ರಿಕೆಗಳಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

Exit mobile version