Site icon Suddi Belthangady

ಬೆಳ್ತಂಗಡಿ: ಧರ್ಮಪ್ರಾಂತ್ಯದ ಕೇಶದಾನ ಕಾರ್ಯಕ್ರಮ


ಬೆಳ್ತಂಗಡಿ: ಧರ್ಮಪ್ರಾಂತ್ಯದ ಫ್ಯಾಮಿಲಿ ಅಪೋಸ್ತಲೇಟ್, ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ಕಾರಿತಾಸ್ ಇಂಡಿಯಾ ನವದೆಹಲಿ ಹಾಗೂ ಸ್ನೇಹಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಇವುಗಳ ವತಿಯಿಂದ ಸ್ಪರ್ಶ- ಕ್ಯಾನ್ಸರ್ ಅರಿವು ಕಾರ್ಯಕ್ರಮದ ಅಂಗವಾಗಿ ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಶದಾನ ಕಾರ್ಯಕ್ರಮವು ಎ.1ರಂದು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ನಡೆಯಿತು.

ಬೆಳ್ತಂಗಡಿ ಸ್ನೇಹಕಿರಣ್ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಜೋನ್ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂದನೀಯ ಫಾ. ಬಿನೋಯಿ ಎ.ಜೆ. ಪ್ರಾಸ್ತಾವನೆಗೈದರು. ಸ್ನೇಹ ಜ್ಯೋತಿ ಮಾಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ಇದರ ಅಧ್ಯಕ್ಷೆ ಶ್ರೀಮತಿ ಎಲಿಯಮ್ಮ ತೋಮಸ್ ಹಾಗೂ ಕೇಶದಾನಿ ಶ್ರೀಮತಿ ಮೇರಿ ಜೋನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಫ್ಯಾಮಿಲಿ ಅಪೋಸ್ತಲೇಟ್ ನಿರ್ದೇಶಕ ವಂದನೀಯ ಫಾ. ಜೋಸೆಫ್ ಚೀರನ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೇಶದಾನದ ಮಹತ್ವದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ’ ಸೋಜರವರು ಸ್ವಾಗತಿಸಿ, ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕಿಯಾದ ಶ್ರೀಮತಿ ಸಿಸಿಲಿಯಾ ತಾವ್ರೋ ವಂದಿಸಿದರು. ಮುಂಡಾಜೆಯ ಬ್ಯೂಟಿಷಿಯನ್ ಶ್ರೀಮತಿ ಜಿನ್ಸಿ ರಾಜೇಶ್ ಕೇಶ ತೆಗೆಯಲು ಸಹಕರಿಸಿದರು. ಒಟ್ಟು 12 ಮಂದಿ ಕೇಶದಾನ ಮಾಡಿದರು. ಕೇಶದಾನ ಮಾಡಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಈ ಕೇಶವನ್ನು ಕ್ಯಾನ್ಸರ್ ರೋಗಕ್ಕೆ ತುತ್ತಾದವರಿಗೆ ವಿಗ್ಗ್ ಮಾಡಲು ಬಳ‌ಲಾಗುವುದು. ಬೆಳ್ತಂಗಡಿ ಧರ್ಮಪ್ರಾಂತ್ಯದ ಎಸ್.ಎಮ್.ವೈ.ಎಮ್ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಡಿ.ಕೆ.ಆರ್.ಡಿ.ಎಸ್ ಸಿಬ್ಬಂಧಿ ವರ್ಗದವರು ಸೇರಿ ಒಟ್ಟು 32 ಮಂದಿ ಉಪಸ್ಥಿತರಿದ್ದು, ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Exit mobile version