ಪಿಲ್ಯ: ಸಾರ್ವತ್ರಿಕ ವಿಧಾನ ಸಭಾ ಚುನಾವಣೆ- 2023 ರ ನೀತಿ ಸಂಹಿತೆ ಜಾರಿಯಾಗುತ್ತಿರುವ ಸಂದರ್ಭದಲ್ಲಿ ಯಾವುದೇ ಅಬಕಾರಿ ಅಕ್ರಮ ಚಟುವಟಿಕೆ ನಡೆಯದಂತೆ ಗಸ್ತು ನಡೆಸುತ್ತಿದ್ದಾಗ, ಪಿಲ್ಯ ಇಲ್ಲಿಯ ಕೃಷ್ಣಪ್ಪ ಪೂಜಾರಿ ಎಂಬವರ ತನ್ನ ಅಡಿಕೆ ತೋಟದಲ್ಲಿ ಅಕ್ರಮವಾಗಿ ಸುಮಾರು 8.280ಲೀ ಮದ್ಯ ಮಾರಾಟ ಮಾಡುವುದನ್ನು ಪತ್ತೆಹಚ್ಚಿ ಆರೋಪಿಯ ವಿರುದ್ದ ಮೊಕದ್ದಮೆ ದಾಖಲಿಸಿದ್ದಾರೆ. ಸುಮಾರು ರೂ.3240/- ಸೊತ್ತು ಪತ್ತೆಯಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಸಯ್ಯದ್ ಶಬೀರ್, ಅಬಕಾರಿ ಕಾನ್ಸ್ ಟೇಬಲ್ ಭೋಜ ಕೆ, ವಿನೋಯ್ ಸಿ.ಜಿ ಮತ್ತು ವಾಹನ ಚಾಲಕ ನವೀನ್ ಕುಮಾರ್ ಪಿ. ಭಾಗಿಯಾಗಿದ್ದರು. ಪ್ರಕರಣವನ್ನು ಸಯ್ಯದ್ ಶಬೀರ್ ಅಬಕಾರಿ ಉಪ ನಿರೀಕ್ಷಕರು, ಬೆಳ್ತಂಗಡಿ ವಲಯರವರು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.