Site icon Suddi Belthangady

ಎ. 4-8: ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಡ್ವಾಲ್ ಸಿರಿ ಜಾತ್ರೆ

ನಿಡಿಗಲ್: ತುಳುನಾಡಿನ ಸತ್ಯನಾಪುರದ ಸಿರಿಗಳ ಮೂಲ ಆಲಡೆ ಕ್ಷೇತ್ರದಲ್ಲಿ ದರ್ಶನಾವೇಶವನ್ನು ಹೊಂದುವ ಸಮಸ್ತ ಭಕ್ತಾದಿಗಳಿಗೆ ಪುಣ್ಯನದಿ ನೇತ್ರಾವತಿಯ ತಟದಲ್ಲಿರುವ ಶ್ರೀ ಪರಶುರಾಮನ ಸೃಷ್ಟಿಯ ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ.
ಇಲ್ಲಿಯ ವರ್ಷಾವಧಿ ಜಾತ್ರೆ ಹಾಗೂ ನಡ್ವಾಲ್ ಸಿರಿ ಜಾತ್ರೆಯು ಎ.4ರಿಂದ ಎ 8ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಮುಂಡೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು. ಎ.4ರಂದು ಬೆಳಿಗ್ಗೆ 11ಕ್ಕೆ ಧ್ವಜಾರೋಹಣ, ಶ್ರೀ ದೇವ ಬಲಿ ನಡೆಯಲಿದೆ.
ಎ.6ರಂದು ಬೆಳಿಗ್ಗೆ 11ಗಂಟೆಗೆ ವೇದಮೂರ್ತಿ ನಾಗಪಾತ್ರಿ ಶ್ರೀ ಸುಬ್ರಹ್ಮಣ್ಯ ಮಧ್ಯಸ್ಥ ಇವರ ನೇತೃತ್ವದಲ್ಲಿ ಆಶ್ಲೇಷಾ ಬಲಿ ಶ್ರೀ ನಾಗದರ್ಶನ ಸೇವೆ. ರಾತ್ರಿ 8ರಿಂದ ಕುಮಾರ ದರ್ಶನ ಶ್ರೀ ದೇವರ ಉತ್ಸವ, ವಾರ್ಷಿಕ ನಡ್ವಾಲ್ ಸಿರಿ ಜಾತ್ರೆ.
ಎ.5ರಂದು ರಾತ್ರಿ 8 ರಿಂದ ಶ್ರೀ ದೇವರ ಉತ್ಸವ, ವಸಂತ ಕಟ್ಟೆ ಪೂಜೆ, ಶ್ರೀ ಅಬ್ಬಗ ದಾರಗರ ಚೆನ್ನಮಣೆ ಆಟ, ಮೂಲ ಮಹಿಷಂತಾಯ, ರಕ್ತೇಶ್ವರಿ, ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿ ದೈವಗಳಿಗೆ ನೇಮೋತ್ಸವ.
ಎ.7ರಂದು ರಾತ್ರಿ ರಂಗಪೂಜೆ, ಎ.8ರಂದು ಗ್ರಾಮದೈವ ಪಿಲಿಚಾಮುಂಡಿ ದೈವದ ನೇಮ, ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹಣ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಜಯಂತ ಗೌಡ ತಿಳಿಸಿದ್ದಾರೆ.

ಎ.6ರಂದು ರಾತ್ರಿ 7.30ರಿಂದ ಧರ್ಮಸಭೆ ಶುಭಾಶಂಸನೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು.ಅಧ್ಯಕ್ಷತೆ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಕೆ.ಜಯಂತ ಗೌಡ ಧಾರ್ಮಿಕ ಉಪನ್ಯಾಸ ಮಂಗಳೂರು ಶ್ರೀ ನಾರಾಯಣ ಗುರೂಜಿ ಮಹಾವಿದ್ಯಾಲಯದ ಉಪನ್ಯಾಸಕ ಕೇಶವ ಬಂಗೇರ, ಗೌರವ ಉಪಸ್ಥಿತಿಯಲ್ಲಿ ನಡ ಗ್ರಾ.ಪಂ ಅಧ್ಯಕ್ಷ ವಿಜಯ ಗೌಡ, ಉಪಾಧ್ಯಕ್ಷೆ ವಿನುತಾ ಶೆಟ್ಟಿ, ಪಂ.ಸದಸ್ಯ ದಿವಾಕರ ಕರ್ಕೇರ, ಪಂ.ಸದಸ್ಯೆ ಮಮತಾ ಆಚಾರ್ಯ ಉಪಸ್ಥಿತರಿರುತ್ತಾರೆ.

Exit mobile version