Site icon Suddi Belthangady

ಧರ್ಮಸ್ಥಳದಲ್ಲಿ ಅಪಘಾತ: ಗುರುವಾಯನ ಕೆರೆ ಪ್ರಸಾದ್ ಶೆಟ್ಟಿ ಮೃತ್ಯು


ಧರ್ಮಸ್ಥಳ : ಧರ್ಮಸ್ಥಳ ಮುಂಡ್ರುಪಾಡಿ ರಸ್ತೆಯ ಧರ್ಮಸ್ಥಳ ಚರ್ಚ್ ಎದುರು ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಗುರುವಾಯನಕೆರೆ ನಿವಾಸಿ ಕುವೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಪ್ರದೀಪ್ ಶೆಟ್ಟಿಯವರ ಸಹೋದರ ಪ್ರಸಾದ್ ಶೆಟ್ಟಿ (27ವ.) ಎಂಬವರು ಮೃತಪಟ್ಟ ಘಟನೆ ನಡೆದಿದೆ. ಧರ್ಮಸ್ಥಳದಿಂದ ಮುಂಡ್ರುಪಾಡಿ ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಮುಂಡ್ರುಪಾಡಿ ಕಡೆಯಿಂದ ಧರ್ಮಸ್ಥಳದತ್ತ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬೈಕ್‌ನಲ್ಲಿ ಇಬ್ಬರಿದ್ದು, ಗಂಭೀರವಾಗಿ ಗಾಯಗೊಂಡ ಪ್ರಸಾದ್ ಶೆಟ್ಟಿ ಅವರನ್ನು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿತ್ತು. ಆದರೆ ಆವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ

Post Settings

Exit mobile version