Site icon Suddi Belthangady

ಧರ್ಮಸ್ಥಳ: ಲಾರಿ – ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಗುರುವಾಯನಕೆರೆ ನಿವಾಸಿ ಗಂಭೀರ

ಧರ್ಮಸ್ಥಳ : ಇಲ್ಲಿಯ ಧರ್ಮಸ್ಥಳ ಮುಂಡ್ರುಪಾಡಿ ರಸ್ತೆಯಲ್ಲಿ ಧರ್ಮಸ್ಥಳ ಚರ್ಚ್ ಎದುರು ಭೀಕರ ಅಪಘಾತದಲ್ಲಿ ಬೈಕ್ ಸವಾರ ಗುರುವಾಯನಕೆರೆ ನಿವಾಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಮಾ.29 ರಂದು ವರದಿಯಾಗಿದೆ.
ಧರ್ಮಸ್ಥಳದಿಂದ ಮುಂಡ್ರುಪಾಡಿ ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಮುಂಡ್ರುಪಾಡಿ ಕಡೆಯಿಂದ ಧರ್ಮಸ್ಥಳದತ್ತ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಬೈಕ್‌ನಲ್ಲಿ ಇಬ್ಬರಿದ್ದು, ಓರ್ವ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ.

Exit mobile version