ಗೇರುಕಟ್ಟೆ : ಆರೋಗ್ಯ ಅಮೃತ ಅಭಿಮಾನ ಕಾರ್ಯಕ್ರಮ ಕಳಿಯ ಗ್ರಾಮ ಪಂಚಾಯತು ಸಭಾವನದಲ್ಲಿ ಮಾ.28 ರಂದು ಜರುಗಿತು. ಪ್ರಾಥಮಿಕ ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಮಧುಮೇಹ ( ಶುಗರ್) ರಕ್ತದೊತ್ತಡ (ಬಿ.ಪಿ) ರಕ್ತ ಪರೀಕ್ಷೆ ಕಳಿಯ ಗ್ರಾಮ ಪಂಚಾಯತು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ.ಕೆ ವಹಿಸಿದ್ದರು.
ಪಂಚಾಯತು ಉಪಾಧ್ಯಕ್ಷೆ ಕುಸುಮ ಎನ್ ಬಂಗೇರ, ಸದಸ್ಯರಾದ ಸುಧಾಕರ ಮಜಲು, ಹರೀಶ್ ಕುಮಾರ್ ಬಿ, ಪುಷ್ಪ ನಾಳ, ಇಂದಿರಾ ಬಿ.ಶೆಟ್ಟಿ, ಶ್ವೇತ ಶ್ರೀನಿವಾಸ್, ಕಾರ್ಯದರ್ಶಿ ಕುಂಞ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಂರಕ್ಷಣಾಧಿಕಾರಿ ಶಕುಂತಲಾ, ಸಮುದಾಯದ ಆರೋಗ್ಯ ಅಧಿಕಾರಿ ನಾಗರಾಜ್ ಆರೋಗ್ಯ ಸಂರಕ್ಷಣಾ ಮತ್ತು ಮುನ್ನೇಚರಿಕೆ ಬಗ್ಗೆ ಮಾಹಿತಿ ನೀಡಿದರು. ಕಳಿಯ ಗ್ರಾಮ ಪಂಚಾಯತು ಸದಸ್ಯರಾದ ದಿವಾಕರ ಎಮ್,ಯಶೋಧರ ಶೆಟ್ಟಿ, ಪಂಚಾಯತು ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಪಂಚಾಯತು ಸಿಬ್ಬಂದಿಗಳು ಭಾಗವಹಿಸಿದರು.
ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಸ್ವಾಗತಿಸಿ, ಧನ್ಯವಾದವಿತ್ತರು.