Site icon Suddi Belthangady

ವೇಣೂರು ಕಥೋಲಿಕ್ ಸ್ತ್ರೀ ಮಂಡಳಿಯಿಂದ ಮಹಿಳಾ ದಿನಾಚರಣೆ

ವೇಣೂರು: ವೇಣೂರು ಸ್ತ್ರೀ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವೇಣೂರು ಕ್ರಿಸ್ತ ರಾಜ ದೇವಾಲಯದ ಸಭಾಂಗಣದಲ್ಲಿ ಮಾ.26 ರಂದು ಆಚರಿಸಲಾಯಿತು. ವೇಣೂರು ಚರ್ಚಿನ ಗುರುಗಳಾದ ವಂ. ಫಾ. ಪೀಟರ್ ಆರ‍್ಹಾನ ಕಾರ‍್ಯಕ್ರಮದ ಉದ್ಘಾಟಿಸಿದರು.


ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ವೇಣೂರು ಘಟಕದ ಸ್ತ್ರೀ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಜೆತ್ರುಡ್ ಡಿಸೋಜ ವಹಿಸಿದ್ದರು. ಕ್ರಿಸ್ತ ರಾಜ ದೇವಾಲಯದ ಉಪಾಧ್ಯಕ್ಷ ಡೆನಿಸ್ ಸಿಕ್ವೇರ , ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಅಧ್ಯಕ್ಷೆ ಶ್ರೀಮತಿ ಗ್ರೇಸಿ ಲೋಬೊ, ವೇಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಪಂಚಾಯತ್ ಸದಸ್ಯ ಅರುಣ್ ಕ್ರಾಸ್ತ, ಸ್ತ್ರೀ ಮಂಡಳಿ ವೇಣೂರು ಘಟಕದ ಸಚೇತಕಿ ಸಿ| ಲಿಲ್ಲಿ ಗೋಮ್ಸ್, ವೇಣೂರು ಸ್ತ್ರೀ ಘಟಕದ ಕಾರ‍್ಯದರ್ಶಿ ಶ್ರೀಮತಿ ಸುಮಿತ ಮೊಂತೋರೊ ಉಪಸ್ಥಿತರಿದ್ದರು.
ಅಧ್ಯಕ್ಷೆ ಜೆತ್ರುಡ್ ಡಿಸೋಜ ಪ್ರಾಸ್ತಾವಿಕ ಸ್ವಾಗತಿಸಿದರು. ಉಪಕಾರ‍್ಯದರ್ಶಿ ಶ್ರೀಮತಿ ಐರಿನ್ ಡಿಕುನ್ಹ ವಾರ್ಷಿಕ ವರದಿ ವಾಚಿಸಿದರು. ಸುಮಿತ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು. ರುಫಿನ ಫೆರ್ನಾಂಡಿಸ್ ವಂದಿಸಿದರು.

Exit mobile version