Site icon Suddi Belthangady

ಬೆಳಾಲು ಪ್ರೌಢಶಾಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಬೆಳಾಲು : ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಜರಗಿತು. ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶಾಲೆಯ ಎಂಟು ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ವಿದಾಯಗೀತೆ ಮತ್ತು ಅನಿಸಿಕೆ ಮಾತುಗಳಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಇಂತಹ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ಒಳಿತಿಗೆ ಶುಭಹಾರೈಕೆಸುವುದೂ ಸಾಮಾನ್ಯ. ಆದರೆ ಬೆಳಾಲು ಪ್ರೌಢಶಾಲೆಯ ಶಿಕ್ಷಕರು ಕೇವಲ ಶುಭಹಾರೈಸದೆ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಆರುನೂರಕ್ಕಿಂತ ಅಧಿಕ ಅಂಕ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ, ಅವರ ಭವಿಷ್ಯದ ಶಿಕ್ಷಣದ ಭದ್ರತೆಗಾಗಿ ಐದು ಸಾವಿರ ರೂಪಾಯಿಗಳಂತೆ(ಒಟ್ಟು ಹದಿನೈದು ಸಾವಿರ ರೂಪಾಯಿ) ಬಹುಮಾನವನ್ನು ನೀಡುವುದಾಗಿ ಆಂಗ್ಲ ಭಾಷಾ ಶಿಕ್ಷಕರಾದ ಜಗದೀಶ್ ಎನ್ , ಶಾರೀರಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾನಂದ ಮತ್ತು ಹಿಂದಿ ಭಾಷಾ ಶಿಕ್ಷಕರಾದ ರಾಜಶ್ರೀಯವರು ಘೋಷಿಸಿದ್ದಾರೆ.

ಈ ಮೂಲಕ ಬೆಳಾಲು ಪ್ರೌಢಶಾಲೆಯ ಶಿಕ್ಷಕರು ವಿಶೇಷ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಮುಂದಾಗಿರುವುದು ರಾಜ್ಯದಲ್ಲೇ ಅತ್ಯಂತ ವಿರಳ ಉದಾಹರಣೆಯಾಗಿದೆ. ಬೆಳಾಲಿನ ಶಿಕ್ಷಕರು ತಮ್ಮದೇ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಘೋಷಿಸಿದ ಆರ್ಥಿಕ ಬಹುಮಾನದ ಬಗ್ಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಾಲು ಪ್ರೌಢಶಾಲೆಯ ಶಿಕ್ಷಕರ ಮಾದರಿ ನಡೆಯ ಬಗ್ಗೆ ಪೋಷಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Exit mobile version