Site icon Suddi Belthangady

ಶ್ರೀ ರಾಮ ಕ್ಷೇತ್ರದಲ್ಲಿ ಚಂದ್ರಮಂಡಲ ರಥೋತ್ಸವ

ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಲ್ಲಿ ನಡೆಯುತ್ತಿರುವ 63 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.27 ರಂದು ರಾತ್ರಿ ಶ್ರೀ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಚಂದ್ರ ಮಂಡಲ ರಥೋತ್ಸವ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಿತು.

ಬೆಳಿಗ್ಗೆ ನವದುರ್ಗಾ ಹೋಮ, ನವ ದುರ್ಗೆಯರಿಗೆ ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಮಹಾ ಪೂಜೆ ನಡೆಯಿತು. ಸಂಜೆ ಶ್ರೀ ದೇವಿ ಸಚಿನ್, ಸಂಗೀತ ಶಿಕ್ಷಕಿ ನಿನಾದ ಕ್ಲಾಸಿಕಲ್ಸ್ ಧರ್ಮಸ್ಥಳ ಇವರಿಂದ ದಾಸವಾಣಿ ಮತ್ತು ಸುಗಮ ಸಂಗೀತ ಜರಗಿತು.

Exit mobile version