Site icon Suddi Belthangady

ಎ. 2 :ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21 ನೇ ವೇಣೂರು ಶಾಖೆ ಉದ್ಘಾಟನೆ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ನಿ, ಸುಳ್ಯ ಇದರ ನೂತನ 21 ನೇ ವೇಣೂರು ಶಾಖೆಯ ಉದ್ಘಾಟನೆಯು ಎ. 2 ರಂದು ಬೆಳಗ್ಗೆ 11.00 ಕ್ಕೆ ಮಂಜುಶ್ರೀ ಕಾಂಪ್ಲೆಕ್ಸ್‌ ಮಹಾವೀರನಗರ ವೇಣೂರಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಪಿ.ಸಿ ಜಯರಾಮ್ ಹೇಳಿದರು.

ಅವರು ಮಾ.27 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಯು ರಾಜ್ಯದ ಉದ್ದಗಲಕ್ಕೆ ಸೇವೆ ನೀಡುತ್ತಿದೆ. ಬೆಳ್ತಂಗಡಿಯಲ್ಲಿ ಇದು 4 ನೇ ಶಾಖೆಯಾಗಿದ್ದು ಕೊಕ್ಕಡ, ಮಡಂತ್ಯಾರು, ಬೆಳ್ತಂಗಡಿ ಹಾಗೂ ವೇಣೂರು ಶಾಖೆಯನ್ನು ಹೊಂದಿದೆ. ದ.ಕ 15 ಶಾಖೆ, ಕೊಡಗು 4 ಶಾಖೆ, ಮೈಸೂರು 1 ಶಾಖೆ, ಹಾಸನ 1 ಶಾಖೆಯನ್ನು ಹೊಂದಿದೆ. ಜನರಿಗೆ ತೊಂದರೆ ಯಾಗದಾಗೆ ಸಹಾಯ ಹಸ್ತ ನೀಡಿದ್ದೇವೆ. ಬೆಳ್ತಂಗಡಿ ಪ್ರಕೃತಿ ವಿಕೋಪ ಬಂದಾಗ ರೂ.2 ಲಕ್ಷ ದೇಣಿಗೆ ನೀಡಿದ್ದೇವೆ. ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಇನ್ನೊಂದು ಶಾಖೆ ಸೋಮಂತ್ತಡ್ಕ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ.

ನೂತನ 21ನೇ ವೇಣೂರು ಶಾಖೆಯ ಉದ್ಘಾಟನೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರು ನೆರವೇರಿಸಲಿದ್ದಾರೆ. ಸಭೆಯ ಆಧ್ಯತೆಯನ್ನು ಸಂಘದ ಅಧ್ಯಕ್ಷ ಪಿ ಸಿ ಜಯರಾಮರವರು ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ವಿಧಾನ ಪರಿಷತ್‌ ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಗಣಕೀಕರಣದ ಉದ್ಘಾಟನೆಯನ್ನು ಶ್ರೀಮತಿ ತ್ರಿವೇಣಿ ರಾವ್ ಕೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಪುತ್ತೂರು ಉಪವಿಭಾಗ ಇವರು ನೆರವೇರಿಸಲಿದ್ದು, ಪ್ರಥಮ ಠೇವಣಿ ಪತ್ರವನ್ನು ಜನಜಾಗೃತಿ ವೇದಿಕೆ, ಬೆಳ್ತಂಗಡಿ, ಇದರ ಮಾಜಿ ಅಧ್ಯಕ್ಷ ಪಿ ತಿಮಪ್ಪ ಗೌಡ ಬೆಳಾಲು ವಿತರಿಸಲಿದ್ದು, ಪ್ರಥಮ ಪಾಲುಪತ್ರ ವಿತರಣೆಯನ್ನು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್‌ ನೆರವೇರಿಸಲಿದ್ದಾರೆ. ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ವಿ.ಜಿ.ಎಸ್ ಸೌಹಾರ್ದ ಸಹಕಾರಿ ನಿ ಮಂಗಳೂರು ಇದರ ಅಧ್ಯಕ್ಷ ಲೋಕಯ್ಯ ಗೌಡ ಕೆ ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾಲ್ ಪ್ಯೂಯೆಲ್ & ಸರ್ವೀಸ್ ವೇಣೂರು ಇದರ ಮಾಲಕ ನವೀನ್‌ಚಂದ ಬಳ್ಳಾಲ್ ಹಾಗೂ ಮಂಜುಶ್ರೀ, ಕಾಂಪ್ಲೆಕ್ಸ್‌ನ ಮಾಲಕರಾದ ಉದಯ ಕುಮಾರ್ ಕಂಬಳಿ ಭಾಗವಹಿಸಲಿದ್ದಾರೆ. ಈ ಸಹಕಾರಿ ವರ್ಷ ಸಂಘಕ್ಕೆ 25 ವರ್ಷಗಳಾಗುತ್ತಿದ್ದು, ಇದರ ಅಂಗವಾಗಿ 25 ಶಾಖೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಬೆಳ್ಳಿ ಹಬ್ಬದ ಅಂಗವಾಗಿ ಸಂಘದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಟಿ ವಿಶ್ವನಾಥ, ಉಪಾಧ್ಯಕ್ಷ ಮೋಹನ್‌ರಾಂ ಸುಳ್ಳಿ ಉಪಸ್ಥಿತರಿದ್ದರು.

Exit mobile version