Site icon Suddi Belthangady

ಬಾರ್ಯ ಬಜಕ್ಕಳ ಕೊರಗಜ್ಜ ಹಾಗೂ ಮಂತ್ರದೇವತೆ ದೈವಾರ್ಷಿಕ ನೇಮೋತ್ಸವ ಸಭಾ ಕಾರ್ಯಕ್ರಮ

ಬಾರ್ಯ : ಬಜಕ್ಕಳ ಕೊರಗಜ್ಜ ಹಾಗೂ ಮಂತ್ರ ದೇವತೆ ದೈವಾರ್ಷಿಕ ನೇಮೋತ್ಸವ ಮತ್ತು ಸ್ವಾಮಿ ಕೊರಗಜ್ಜ ಆರಾಧನಾ ಟ್ರಸ್ಟ್‌,ಉದ್ಘಾಟನಾ ಕಾರ್ಯಕ್ರಮ ಮಾ.25 ರಂದು ಬಜಕ್ಕಳ ಕೊರಗಜ್ಜ ಸನ್ನಿಧಿಯಲ್ಲಿ ಜರುಗಿತು.


ಪೊಳಲಿ ಆಧ್ಯಾತ್ಮಿಕ ಗುರುಗಳಾದ ಶ್ರೀ ಮಾದುಕೋಡಿ ಸ್ವಾಮಿ ಕೊರಗಜ್ಜ ಸನ್ನಿಧಿ ವಿಜಯ ಸುವರ್ಣ ರವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.


ಸ್ವಾಮಿ ಕೊರಗಜ್ಜ ಆರಾಧನಾ ಸಮಿತಿ ಗೌರವಾಧ್ಯಕ್ಷ ಶ್ರೀ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಾ ದೇವರ,ದೈವಗಳ ಕಾರ್ಯಕ್ರಮದ ಬಗ್ಗೆ ಮಕ್ಕಳಿಗೆ ಬಾಲ್ಯದಲ್ಲೇ ಧಾರ್ಮಿಕ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರಿಯ ವಾಗಿಸುವ ಕೆಲಸ ಪೋಷಕರಿಂದ ಅಗಬೇಕಾಗಿದೆ. ಅಗ ಮಾತ್ರ
ದೈವ- ದೇವರಿಗೆ ಹಾಗೂ ಭಕ್ತಾದಿಗಳಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಿದೆ ಎಂದು ಹೇಳಿದರು.
ಬಜಕ್ಕಳ ಕೊರಗಜ್ಜ ಆರಾಧನಾ ಟ್ರಸ್ಟ್‌ ಉಪಾಧ್ಯಕ್ಷ ಕೇದಂಬಾಡಿ ಗುತ್ತು ಸೀತಾರಾಮ ರೈ ಕೊರಗಜ್ಜ ಆರಾಧನಾ ಟ್ರಸ್ಟ್‌ ಮೂಲಕ ಸನ್ನಿಧಿಯು ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ಗ್ರಾಮದ ಎಲ್ಲಾ ಭಕ್ತಾದಿಗಳ ಸಹಕಾರ ಅಗತ್ಯವಿದೆ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ ಗೌಡ ಎನ್, ಕಣಿಯೂರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಜಯರಾಮ ಕಲ್ಲಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೇಲಿನ ಬಜಕ್ಕಳ ಕೊರಗಜ್ಜ ಆರಾಧನಾ ಟ್ರಸ್ಟ್‌ ಅಧ್ಯಕ್ಷ ದೇವರಾಜ ಬಂಗೇರ, ಉಪಾಧ್ಯಕ್ಷರಾದ ಪ್ರವೀಣ್ ಪೊರ್ಕಳ, ರಾಘವ ಅಡಪ, ಪ್ರಧಾನ ಕಾರ್ಯದರ್ಶಿ ಎಂ. ಬೊಮ್ಮಯ್ಯ ಬಂಗೇರ ಮುಗ್ಗ, ಜೊತೆ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಕ್ಕಳ, ಸಹ ಕಾರ್ಯದರ್ಶಿ ವಿನಯ ಶೆಟ್ಟಿ ನೀನಿ, ಕೋಶಾಧಿಕಾರಿ ಕೆ.ಸುರೇಶ್ ಸುವರ್ಣ ಹಾಗೂ ಸುರೇಶ್ ಮಜುಗುಡೆ, ಸಂತೋಷ್ ಬಜಕ್ಕಳ ರವರನ್ನು ಗೌರವಾಧ್ಯಕ್ಷ ಶ್ರೀ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು.

ಸ್ಥಳೀಯ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ದೈವಗಳಿಗೆ ಗಗ್ಗರ ಸೇವೆ ಜರುಗಿತು.
ಪ್ರಧಾನ ಕಾರ್ಯದರ್ಶಿ ಎಂ.ಬೊಮ್ಮಯ್ಯ ಬಂಗೇರ ಪ್ರಸ್ತಾವಿಕ ಮಾತನಾಡಿದರು. ಕು.ದೃತಿ ಪ್ರಾರ್ಥನೆ ಮಾಡಿದರು. ಪ್ರವೀಣ್ ರೈ ಪೋರ್ಕಳ ಸ್ವಾಗತಿಸಿದರು.ರಾಜೇಶ್ ಹೆಣ್ಣಡ್ಕ ಕಾರ್ಯಕ್ರಮ ನಿರೂಪಣೆ ಮಾಡಿ, ಸಂತೋಷ್ ಬಜಕ್ಕಳ ಧನ್ಯವಾದವಿತ್ತರು.

Exit mobile version