ಉಪ್ಪಿನಂಗಡಿ: ಭಾನುವಾರದ ರಜೆಯ ಮೂಡ್ ನಲ್ಲಿ ಉಪ್ಪಿನಂಗಡಿಯ ಸದರ್ನ್ ಆಫ್ ರೋಡರ್ಸ್ ಆಯೋಜಿಸಿದ್ದ ಆಫ್ ರೋಡ್ ಚಾಲೆಂಜ್ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಫ್ ರೋಡ್ ನಲ್ಲಿ ಜೀಪ್ ಚಲಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.
ಲೀಲಾಜಾಲವಾಗಿ ಜೀಪ್ ಚಲಾಯಿಸಿದ ಶಾಸಕ ಪೂಂಜ
ಉಪ್ಪಿನಂಗಡಿಯ ಆಫ್ ರೋಡ್ ನ ಕಠಿಣ ಟ್ರ್ಯಾಕ್ ನಲ್ಲಿ ಶಾಸಕ ಹರೀಶ್ ಪೂಂಜ ಲೀಲಾಜಾಲವಾಗಿ ಜೀಪ್ ಚಲಾಯಿಸಿ ಸೈ ಎನಿಸಿಕೊಂಡರು. ಎದುರಾದ ಯಾವುದೇ ಚಾಲೆಂಜ್ ಗಳನ್ನು ಲೆಕ್ಕಿಸದೇ ಜೀಪ್ ಚಲಾಯಿಸಿದ್ದನ್ನು ನೋಡಿದ ಪ್ರೇಕ್ಷಕರು ಶಾಸಕರ ಡ್ರೈವಿಂಗ್ ಗೆ ಫಿದಾ ಆದರು.
ಸುದ್ದಿಗೆ ವಿಶೇಷ ಸಂದರ್ಶನ ನೀಡಿದ ಶಾಸಕ ಪೂಂಜ
ಜೀಪ್ ಚಲಾಯಿಸಿದ ನಂತರ ಸುದ್ದಿಯೊಂದಿಗೆ ಶಾಸಕ ಪೂಂಜ ಮಾತನಾಡಿದರು. ಆಫ್ ರೋಡ್ ನಲ್ಲಿ ಮೊದಲ ಬಾರಿಗೆ ಜೀಪ್ ಚಲಾಯಿಸಿದ್ದೇನೆ, ಅದರ ಬಗ್ಗೆ ಖುಷಿಯಿದೆ ಎಂದು ತಿಳಿಸಿದರು.