Site icon Suddi Belthangady

ಅಳದಂಗಡಿ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ದೃಢಕಲಶ ಮತ್ತು ಅಭಿನಂದನಾ ಸಭೆ

ಅಳದಂಗಡಿ :ಜೀರ್ಣೋದ್ಧಾರ, ಬ್ರಹ್ಮಕಲಶದಂತಹ ಶ್ರೇಷ್ಠಕಾರ್ಯ ನಡೆದಿದೆ. ಎಲ್ಲರೂ ದೇವಸ್ಥಾನಕ್ಕೆ ಬರುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಮಾ.26 ರಂದು ಅಳದಂಗಡಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ದೃಢಕಲಶ ಸಂದರ್ಭ ಆಯೋಜಿಸಲಾದ ಅಭಿನಂದನಾ ಸಭೆಯಲ್ಲಿ ಅವರು ಭಾಗವಹಿಸಿದರು.
ಕಳೆದ ಫೆ.4 ರಿಂದ 9 ರವರೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಆ ಸಂದರ್ಭ ಯಶಸ್ಸಿಗೆ ಸಹಕರಿಸಿದವರನ್ನು ಬ್ರಹ್ಮಕಲಶೋತ್ಸವ ಅಧ್ಯಕ್ಷರಾಗಿದ್ದ ಶಾಸಕರು ಅಭಿನಂದಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ ಜೀರ್ಣೋದ್ಧಾರ ಕಾರ್ಯಗಳ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಉಂಗಿಲಬೈಲು ಬ್ರಹ್ಮಕಲಶೋತ್ಸವದ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಸ್ವಾಗತ ಸಮಿತಿ ಅಧ್ಯಕ್ಷ ಶಿವಪ್ರಸಾದ ಅಜಿಲ, ಸಂಚಾಲಕ ಸೋಮನಾಥ ಬಂಗೇರ, ಕೋಶಾಧಿಕಾರಿ ಅನಿಲ್ ಮಾಳಿಗೆ ಮನೆ, ಪ್ರಧಾನ ಅರ್ಚಕ ಸೋಮನಾಥ ಮಯ್ಯ ವೇದಿಕೆಯಲ್ಲಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವಿಜಯಕುಮಾರ್ ನಾವರ ವಂದಿಸಿದರು.
ಇದಕ್ಕೂ ಮೊದಲು ಪೊಳಲಿ ಕೋಡಿಮಜಲು ವೇದಮೂರ್ತಿ ಅನಂತಪದ್ಮನಾಭ ಉಪಾಧ್ಯಾಯರು ದೃಢ ಕಲಶಾಭಿಷೇಕವನ್ನು ನಡೆಸಿ ಆಶೀರ್ವದಿಸಿದರು.

Exit mobile version