ಬೆಳಾಲು : ಮಾಯ ಶ್ರೀ ಮಹಾದೇವ ದೇವಸ್ಥಾನದಲ್ಲಿ ಸರಕಾರದ ರೂ. 25 ಲಕ್ಷಗಳ ಅನುದಾನದಲ್ಲಿ ನಿರ್ಮಾಣಗೊಳ್ಳುವ ಸಭಾಭವನಕ್ಕೆ ಶಿಲಾನ್ಯಾಸವನ್ನು ಮಾ.24 ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಪದ್ಮಗೌಡ, ಬೆಳಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಸದಸ್ಯರುಗಳಾದ ಸುರೇಂದ್ರ ಗೌಡ ಎಸ್., ವಿದ್ಯಾ ಶ್ರೀನಿವಾಸ ಗೌಡ, ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್ ಜೈನ್, ಮಾಯ ಗುತ್ತು ಪುಷ್ಪದಂತ ಜೈನ್, ಅರ್ಚಕ ಕೇಶವ ರಾಮಯಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶಿವಕುಮಾರ್ ಬಾರಿತ್ತಾಯ, ಗಂಗಯ್ಯ ಗೌಡ ,ನಾಣ್ಯಪ್ಪ ಪೂಜಾರಿ, ದಿನೇಶ್ ಎಂ. ಕೆ., ರಾಜಪ್ಪ ಗೌಡ, ಸುಕನ್ಯಾ ನಾರಾಯಣ ಸುವರ್ಣ, ಚಂದ್ರಾವತಿ, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಬೆಳಾಲು ಸಹಕಾರ ಸಂಘದ ನಿರ್ದೇಶಕ ರಮೇಶ್ ಗೌಡ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಧರ್ಮೇಂದ್ರ ಕುಮಾರ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಶೇಖರ ಗೌಡ ಕೊಲ್ಲಿಮಾರು, ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ, ವಿವಿಧ ಸಮಿತಿಗಳ ಪದಾಧಿಕಾರಿಗಳು ಸದಸ್ಯರು, ಊರವರು ಹಾಜರಿದ್ದರು. ಇದೇ ದಿನ ಪ್ರತಿಷ್ಠಾ ವಾರ್ಷಿಕ ದಿನಾಚರಣೆ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು.