ಬೆಳ್ತಂಗಡಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ – 2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ” ಜಲ್ ಜೀವನ್ ಮಿಷನ್ ” ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮ ಪಂಚಾಯತ್ ನಲ್ಲಿ ಎಫ್.ಟಿ.ಕೆ ತರಬೇತಿಯನ್ನು ಮಾ.21 ರಂದು ಆಯೋಜಿಸಲಾಗಿತ್ತು.
ತರಬೇತಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಿಲ್ಪಾ ಎ, ಉಪಾಧ್ಯಕ್ಷ ಸತೀಶ್ ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ, ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ,ನೀರು ಘಂಟಿ ಗಳು ಹಾಗೂ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.
ತರಬೇತಿಯನ್ನು ಗ್ರಾಮ್ಸ್ ರಾಯಚೂರು ಸಂಸ್ಥೆಯ ಜಲ ಜೀವನ್ ಮಿಷನ್ ಬೆಳ್ತಂಗಡಿ ತಾಲೂಕಿನ ಸಮುದಾಯ ಸಂಘಟಕರಾದ ವಿಶಾಲಾಕ್ಷಿ ನೀರಿನ ಗುಣಮಟ್ಟವನ್ನುಎಫ್.ಟಿ.ಕೆ ಕಿಟ್ ನ ಮೂಲಕ ಪರೀಕ್ಷೆಯನ್ನು ಪ್ರಾತ್ಯಾಕ್ಷಿಕವಾಗಿ ಮಾಡಿ ತೋರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕೆಲಸದ ಬಗ್ಗೆ ಚರ್ಚೆ ಮಾಡಿ ನೀರಿನ ಸಮಸ್ಯೆಯಿರುವ ಜನರಿಗೆ ನೀರು ನೀಡುವುದೆಂದು ನಿರ್ಧರಿಸಲಾಯಿತು.
ಈ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿನ ಜಲಜೀವನ್ ಮಿಷನ್ ಸಮುದಾಯ ಸಂಘಟಕರಾದ ಶ್ರೀಮತಿ ವಿಶಾಲಾಕ್ಷಿ ಇವರು ಆಯೋಜಿಸಿ ಯಶಸ್ವಿಗೊಳಿಸಿದರು.