Site icon Suddi Belthangady

ಕಾರಿಂಜದಲ್ಲಿ ನಡೆದ ಜಿದ್ದಾಜಿದ್ದಿನ ಹಗ್ಗಜಗ್ಗಾಟದ ವೇಳೆ ಹಗ್ಗವೇ ತುಂಡು: ಬೆಳ್ಳೆ ಮತ್ತು ಉಜಿರೆಯ ಯುವಕರ ನಡುವಿನ ಪಂದ್ಯದ ವೇಳೆಯ ಘಟನೆ: ವಿಡಿಯೋ ವೈರಲ್

ಕಾರಿಂಜ: ತುಳುನಾಡಿನಲ್ಲಿ ಹಗ್ಗಜಗ್ಗಾಟದ ಕ್ರೇಜ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಗ್ಗಜಗ್ಗಾಟವೂ ಮ್ಯಾಟ್‌ನಲ್ಲಿ ಆರಂಭಗೊಂಡಿದೆ. ಕಾರಿಂಜದಲ್ಲಿ ನಡೆದ ಜಿದ್ದಾಜಿದ್ದಿನ ಹಗ್ಗಜಗ್ಗಾಟ ಪಂದ್ಯದ ವೇಳೆ ಹಗ್ಗವೇ ತುಂಡಾದ ಘಟನೆ ನಡೆದಿದ್ದು ಇದರ ವಿಡಿಯೋ ವ್ಯಾಪಕ ವೈರಲ್ ಆಗಿದೆ.

ಕಾರಿಂಜದಲ್ಲಿ ಕಾರಿಂಜ ಫ್ರೆಂಡ್ಸ್ ವತಿಯಿಂದ ಆಯೋಜನೆಗೊಂಡಿದ್ದ ಮ್ಯಾಟ್ ಅಂಕಣದ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಬಲಾಢ್ಯ ತಂಡಗಳಾದ ಯುವ ಸ್ಫೂರ್ತಿ ಬೆಳ್ಳೆ ಮತ್ತು ಕುಂಜರ್ಪ ಫ್ರೆಂಡ್ಸ್ ಉಜಿರೆ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿತ್ತು. ಬಲಾಢ್ಯ ತಂಡಗಳ ಸಮಾನ ಹೋರಾಟಕ್ಕೆ ಕೊಂಚವೂ ಹಗ್ಗ ಮಿಸುಕಾಡಲೇ ಇಲ್ಲ. ಯಾವ ಕಡೆಯೂ ಹಗ್ಗ ಸಾಗದೇ ಇದ್ದಿದ್ದನ್ನು ಪ್ರೇಕ್ಷಕರು ತದೇಕ ಚಿತ್ತದಿಂದ ನೋಡುತ್ತಿರುವಾಗ ಹಗ್ಗವೇ ಸೋತು ತುಂಡಾದ ಘಟನೆ ನಡೆಯಿತು.

ಪುಲ್ ಗ್ರಿಪ್ ಮಾದರಿಯ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಘಟನೆ ನಡೆದಿದೆ ಎಂದು ಅಂದಾಜಿಸಲಾಗುತ್ತಿದೆ. ತಂಡಗಳ ಬಲಿಷ್ಠತೆ ಮತ್ತು ಅವರ ಹೋರಾಟ ಮನೋಭಾವವನ್ನು ನೋಡಿದ ಪ್ರೇಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ.

Exit mobile version