ಉಜಿರೆ: ಗುಂಪು ಘರ್ಷಣೆ, ಗಲಭೆ, ಹೊಡೆದಾಟ ಮೊದಲಾದ ತುರ್ತು ಸಂದರ್ಭದಲ್ಲಿ ಪೊಲೀಸರು ಕೈಗೊಳ್ಳಬೇಕಾದ ಕರ್ತವ್ಯ ಹಾಗೂ ಕಾರ್ಯಾಚರಣೆ ಬಗೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ರಥಬೀದಿಯಲ್ಲಿ ಮಾ. 21 ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಪೊಲೀಸರಿಗೆ ಮಂಗಳೂರಿನ ವಿಶೇಷ ಪರಿಣತ ಪೊಲೀಸ್ ತಂಡದಿಂದ ತರಬೇತಿ ಕಾರ್ಯಾಗಾರ ನಡೆಯಿತು.
ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಎಸ್.ಪಿ. ಅವರ ಆದೇಶದಂತೆ ಪ್ರತಿ ಜಿಲ್ಲೆಗಳಲ್ಲೂ ಪೊಲೀಸರಿಗೆ ಕಾರ್ಯಾಚರಣೆ ಬಗೆಗೆ ವಿಶೇಷ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ಉಜಿರೆಯಲ್ಲಿ ನಡೆದ ಅಣಕು ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ತಾಲೂಕಿನ 5೦ ಪೊಲೀಸರಿಗೆ ಮಂಗಳೂರಿನ 10 ವಿಶೇಷ ಪರಿಣತ ಪೊಲೀಸರು ಕಾರ್ಯಾಗಾರ ನಡೆಸಿಕೊಟ್ಟರು.
ಮಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಸಹದೇವ, ಪ್ರಶಾಂತ್, ರೂರಲ್ ಠಾಣೆಯ ಸತ್ಯನಾರಾಯಣ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮೊದಲಾದವರು ನೇತೃತ್ವ ವಹಿಸಿದ್ದರು.