Site icon Suddi Belthangady

ಮಾ.30,31: ಲಾಯಿಲ ಪಿಲಿಪಂಜರ ಶ್ರೀ ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಗುಳಿಗ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನೇಮೋತ್ಸವ

ಲಾಯಿಲ :ಲಾಯಿಲ ಗ್ರಾಮದ ಪಿಲಿಪಂಜರ ಕ್ಷೇತ್ರ ಶ್ರೀ ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಹಾಗೂ ಗುಳಿಗ ದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವ ಮಾ.30 ಮತ್ತು 31 ರಂದು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ ಕುಂಟಿನಿ ಹಾಗೂ ಕಾರ್ಯದರ್ಶಿ ಪುಷ್ಪರಾಜ್ ಲಾಯಿಲ ಹೇಳಿದರು. ಅವರು ಮಾ.21 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.


ಪಿಲಿಪಂಜರ ಕ್ಷೇತ್ರದಲ್ಲಿ ಹಿಂದಿನ ಕಾಲದ ಇತಿಹಾಸವಿರುವ ಉಳ್ಳಾಕ್ಕುಲು, ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಗುಳಿಗ, ದೈವಗಳ ವಾರ್ಷಿಕ ಉತ್ಸವಾಧಿಗಳು ನಡೆದು ತೆರಳುವ ಜಾಗವಾಗಿದೆ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ವಾಸ್ತು ಶಿಲ್ಪಿ ರವಿರಾಮ ಸಿದ್ಧಾಮೂಲೆಯವರ ಮಾರ್ಗದರ್ಶನದಲ್ಲಿ ಊರ ಹಾಗೂ ಪರ ಊರ ಭಕ್ತರ ಸಹಕಾರದೊಂದಿಗೆ ಸುಮಾರು ರೂ. 45 ಲಕ್ಷ ವೆಚ್ಚದಲ್ಲಿ ಕ್ಷೇತ್ರದ ನಿರ್ಮಾಣದ ಕಾರ್ಯಗಳು ನಡೆದಿದೆ. ತಂತ್ರಿಗಳಾದ ವೇ. ಮೂ. ಪಚ್ಚಡಿಬೈಲು ಪಿ. ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ನಡೆಯಲಿದೆ.
ಕಾರ್ಯಕ್ರಮದ ಯಶಸ್ವಿಗೆ 5 ಬೈಲುವಾರು ಸಮಿತಿ ರಚಿಸಿ ಆರ್ಥಿಕ ಕ್ರೋಢಿಕರಣ ಮಾಡಲಾಗಿದ್ದು. ಎರಡು ದಿನಗಳಲ್ಲಿ ಅನ್ನ ದಾಸೋಹ ನಡೆಯಲಿದೆ. ಮಾ.31 ರಂದು ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ ಸಂಜೆ ಭಂಡಾರ ಇಳಿದು ರಾತ್ರಿ ದೈವಗಳ ನೇಮೋತ್ಸವ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಕೋಶಾಧಿಕಾರಿ ಗಿರೀಶ್ ಡೋಂಗ್ರೆ, ಉಪಾಧ್ಯಕ್ಷ ಗಣೇಶ್ ಲಾಯಿಲ, ಜೊತೆ ಕೋಶಾಧಿಕಾರಿ ರಮೇಶ್ ಲಾಯಿಲ, ಲಕ್ಷ್ಮಣ ಜಿ. ಎಸ್., ಕಾರ್ಯಕಾರಿ ಸಮಿತಿ ಸದಸ್ಯರಾದ ಗಣೇಶ್ ಆರ್. ಲಾಯಿಲ, ಅರವಿಂದ ಶೆಟ್ಟಿ ಲಾಯಿಲ ಉಪಸ್ಥಿತರಿದ್ದರು.

Exit mobile version