ಉಜಿರೆ :ಕೃಷಿ ಇಲಾಖೆ ಬೆಳ್ತಂಗಡಿ ಹಾಗೂ ಪ್ರಗತಿ ಮಹಿಳಾ ಮಂಡಲ ,ಹಾಗೂ ಗ್ರಾಮ ಪಂಚಾಯತ್ ಉಜಿರೆ ಇದರ ಸಹಭಾಗಿತ್ವದಲ್ಲಿ ಹೊರ ಆವರಣ ಕೃಷಿ ತರಬೇತಿ ಕಾರ್ಯಕ್ರಮವು ಮಾ.18 ರಂದು ಗ್ರಾಮ ಉಜಿರೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್. ಶೆಟ್ಟಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಜೀವ ನಾಯ್ಕ ಇವರು ಟೆರೇಸ್ ಗಾರ್ಡನ್ ಬಗ್ಗೆ, ರಾಮ್ ಕಿಶೋರ್ ರವರು ಹಲಸು ಸಂಸ್ಕರಣೆಯ ಬಗ್ಗೆ ,ಕೃಷ್ಣ ಭಟ್ ಶಿರಂಕಲ್ಲು ಜೇನು ಕೃಷಿಯ ಬಗ್ಗೆ ಮಯೂರ್ ರವರು ಚಾಕೊಲೇಟ್ ತಯಾರಿಯ ಬಗ್ಗೆ ಹಾಗೂ ಅಡಿಕೆಬೆಳೆಯ ಮಾಹಿತಿಯನ್ನು ಮಧು ವಿಜ್ಞಾನಿಗಳು, CPCRI ಇವರು ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರವಣ್ ಕುಮಾರ್, ಪಂಚಾಯತ್ ಸದಸ್ಯರು, ಮಹಿಳಾ ಮಂಡಲದ ಸದಸ್ಯರು, ಪ್ರೇರಣಾ ಸಂಜೀವಿನಿ ಸದಸ್ಯರು ಹಾಗೂ ಇತರರು ಇದರ ಸದುಪಯೋಗ ಪಡೆದುಕೊಂಡರು