
ಕಲ್ಲೇರಿ: ಸಾವಿರಾರು ಬಡ ನಿರ್ಗತಿಕ ರೋಗಿಗಳ ಹೆಣ್ಣುಮಕ್ಕಳ ಬಾಳಿಗೆ ನೆರವಾಗುತ್ತಿರುವ ದ.ಕ ಜಿಲ್ಲೆಯ ಹೆಮ್ಮೆಯ ಚಾರಿಟೇಬಲ್ ಅಲ್ ಉಮ್ಮಾ ತಂಡವು ಇದೀಗ ಕಲ್ಲೇರಿ ಭಾಗದ ಸೂರಿಲ್ಲದ ಕುಟುಂಬಕ್ಕೆ ಅಲ್ ಉಮ್ಮಾ ಹೆಲ್ಪ್ ಲೈನ್ ವತಿಯಿಂದ ನಿರ್ಮಾಣಗೊಂಡ ಮುತಹಲ್ಲಿಂ ಬಾಲಕನ ಮನೆ ಕೀ ಹಸ್ತಾಂತರ ಕಾರ್ಯಕ್ರಮವು ಮಾ. 20 ರಂದು ಮುಬಾರಕ್ ನಗರ ಕಲ್ಲೇರಿಯಲ್ಲಿ ನಡೆಯಿತು.
ಉದ್ಘಾಟನೆಯನ್ನು ಮುತಹಲ್ಲಿ ಬಾಲಕ ಅಬ್ದುಲ್ ಹಕೀಂ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜನಾಬ್ ಶರೀಫ್ ಮದನಿ ಮುಹಲ್ಲಿಮರು ನೂರುಲ್ ಹುದಾ ಜುಮಾ ಮಸೀದಿ ಕಲ್ಲೇರಿ ಇವರು ದುವಾ ನೆರವೇರಿಸಿದರು. ಮನೆ ಕೀ ಯನ್ನು ಅಕ್ಬರ್ ಬೆಳ್ತಂಗಡಿ , ಹಾಗೂ ಅಲ್ ಉಮ್ಮ ಹೆಲ್ಪ್ ಲೈನ್ ಪದಾಧಿಕಾರಿ ಯೂಸುಫ್ ಕೊಯ್ಯೂರು ರವರು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಅಲ್ ಉಮ್ಮ ಸದಸ್ಯರಾದ ಮಹಮ್ಮದ್ ಬಿ.ಹೆಚ್., ಶಫೀಖ್ ಮುಬಾರಕ್ ನಗರ, ಶರೀಫ್ ದರ್ಖಸ್, ಶಾಹಿರ್ ಕೊಯ್ಯೂರ್, ಇರ್ಷದ್ ಎರುಕಡಪು, ಅಬುಸಾಲಿ ಮಜ್ಜಿಮ್ಮಾರ್, ಸ್ಥಳೀಯರಾದ ರಶೀದ್ ಮುಬಾರಕ್ ನಗರ, ಮತ್ತಿತರರು ಭಾಗವಹಿಸಿದರು. ಕಾರ್ಯಕ್ರಮದ ಮಹಮ್ಮದ್ ಮುರ್ಷಿದ್ ಹಾಶಿಮಿ ಅಲ್ ಹಿಕಮಿ ಮುದರ್ರಿಸ್ ಕುಪ್ಪೆಟ್ಟಿ ದುಅ ಹಾಗೂ ಧನ್ಯವಾದ ಯೂಸುಫ್ ಕೊಯ್ಯೂರ್ ನೆರವೇರಿಸಿದರು.