Site icon Suddi Belthangady

ಕರಾಯ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವ

ಕರಾಯ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಪಿ. ಆರ್ . ಅನಂತಕೃಷ್ಣ ಕುದ್ದಣ್ಣಾಯ ಅಭಿವೃದ್ದಿ ಸಮಿತಿ, ಗೌರವ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು , ಉತ್ಸವ ಸಮಿತಿ ಹಿರಿಯರಾದ ಧರ್ಣಪ್ಪ ಹೋಟೆಲ್ ನೇತ್ರಾವತಿ, ಗುಮ್ಮಣ್ಣ ಗೌಡ ಕರಾಯ , ಲಕ್ಷ್ಮಣ ಶೆಟ್ಟಿ , ನೋಣಯ್ಯ ಮೇಸ್ತ್ರಿ ಕರಾಯ, ಅಚ್ಯುತ ಪ್ರಭು, ವಾಸುದೇವ ಕಲ್ಲೇರಿ, ಕರಾಯ ಭಜನಾ ಮಂದಿರದ ಅಧ್ಯಕ್ಷ ಜಗದೀಶ್ ಮೈರ ಮತ್ತು ಊರಿನ ಸಮಸ್ತ ಭಕ್ತಾದಿಗಳು ಭಾಗವಹಿಸಿದ್ದರು.

ಕರಾಯ ವೇದಮೂರ್ತಿ ಹರಿಪ್ರಸಾದ್ ವೈಲಾಯರು ದೇವರ ಬಳಿ ಉತ್ಸವ ನಡೆಸಿದರು. ನಂತರ ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

Exit mobile version