Site icon Suddi Belthangady

ಕೊಕ್ಕಡ-ಅರಸಿನಮಕ್ಕಿ ರಸ್ತೆಯ ಹೊಸ್ತೋಟ ವಾಳ್ಯದ ಶಂಕರ ಜೋಶಿಯವರ ತೋಟಕ್ಕೆ ಕಾಡಾನೆ ದಾಳಿ: ಅಪಾರ ಹಾನಿ

ಕೌಕ್ರಾಡಿ ಗ್ರಾಮದ ಕೊಕ್ಕಡ-ಅರಸಿನಮಕ್ಕಿ ರಸ್ತೆಯ ಹೊಸ್ತೋಟ ವಾಳ್ಯದ ಶಂಕರ ಜೋಶಿ ಎಂಬವರ ತೋಟಕ್ಕೆ ಮಾ.18 ರಂದು ರಾತ್ರಿ ಕಾಡಾನೆಗಳು ದಾಳಿ ನಡೆಸಿ 25 ಅಡಕೆ ಗಿಡ, 60 ಬಾಳೆ, ಒಂದು ತೆಂಗಿನ ಮರ, ಸುಮಾರು 25ರಷ್ಟು ಇತರ ನೆರಳು ಕೊಡುವ ಮರಗಳನ್ನು ಧ್ವಂಸ ಮಾಡಿವೆ. ಅಲ್ಲದೆ ತೋಟದ ನೀರಾವರಿಯ ಪೈಪ್ ಲೈ ನ್, 15ಕ್ಕಿಂತ ಅಧಿಕ ಸ್ಪ್ರಿಂಕ್ಲರ್ ಪಾಯಿಂಟ್ ಗಳಿಗೆ ಹಾನಿ ಉಂಟುಮಾಡಿವೆ.


ಮನೆಯ ಸಮೀಪದವರೆಗೂ ಆಗಮಿಸಿದ ಕಾಡಾನೆಗಳು ಬಳಿಕ ಪರಿಸರದಲ್ಲಿ ತಿರುಗಾಟ ನಡೆಸಿವೆ. ಹೆಜ್ಜೆಗಳ ಆಧಾರದಲ್ಲಿ ಒಂದು ದೊಡ್ಡ ಆನೆ ಹಾಗೂ ಒಂದು ಸಣ್ಣ ಆನೆ ಬಂದಿರುವ ಶಂಕೆ ವ್ಯಕ್ತವಾಗಿದೆ.

Exit mobile version