Site icon Suddi Belthangady

ಚಾರ್ಮಾಡಿ ಚೆಕ್ ಪೋಸ್ಟ್ ಗೆ ಎಸ್ .ಪಿ. ಭೇಟಿ

ಚಾರ್ಮಾಡಿ : ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಗಡಿ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲು ಅಗತ್ಯವಾದ ಕ್ರಮ ಕೈಗೊಂಡಿರುವ ಚಾರ್ಮಾಡಿ ಚೆಕ್ ಪೋಸ್ಟ್ ಗೆ ದ. ಕ ಜಿಲ್ಲಾ ಪೊಲೀಸ್ ಎಸ್ ಪಿ ಡಾ.ಅಮಟೆ ವಿಕ್ರಂ ಮಾ .  19 ರಂದು  ಭೇಟಿ ನೀಡಿ ಪರಿಶೀಲನೆ ನಡೆಸಿ, ವ್ಯವಸ್ಥೆಗಳನ್ನು ವೀಕ್ಷಿಸಿ,ಸೂಕ್ತ ಮಾರ್ಗದರ್ಶನ ನೀಡಿದರು. ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್, ಇನ್ಸ್ ಪೆಕ್ಟರ್ ಸತ್ಯನಾರಾಯಣ, ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ ಐ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 
ಚಾರ್ಮಾಡಿ ಗ್ರಾಪಂಗೆ ಭೇಟಿ
ಚಾರ್ಮಾಡಿ ಗ್ರಾ. ಪಂ . ಗೆ ತೆರಳಿದ ಎಸ್ ಪಿ ಅವರು ಕೆಲವು ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಕುಂದು ಕೊರತೆಗಳ ಕುರಿತು ವಿವರಣೆ ಪಡೆದರು.
ಗಾಂಜಾ ಬೆಳೆ, ಮಾರಾಟ,ಸೇವನೆ  ಕಂಡು ಬಂದರೆ ಅಂಥವರ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರು ಗೌಪ್ಯವಾಗಿ ಇಡಲಾಗುವುದು. ಕಾನೂನು ಸುವ್ಯವಸ್ಥೆ ಪಾಲಿಸಲು ಪ್ರತಿಯೊಬ್ಬ ನಾಗರಿಕ ಸಹಕರಿಸಬೇಕು ಎಂದು ಹೇಳಿದರು.


ಚಾರ್ಮಾಡಿ ಪರಿಸರದಲ್ಲಿ ಬೀಟ್ ಪೊಲೀಸ್ ಹಾಗೂ ರಾತ್ರಿ ರೌಂಡ್ಸ್ ಹೆಚ್ಚಿಸಬೇಕು.ತಡರಾತ್ರಿ ರಸ್ತೆ ಬದಿಗಳಲ್ಲಿ ಅನಗತ್ಯ ಠಳಾಯಿಸುವವರು ಕಂಡು ಬಂದರೆ ಅಂತವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು . ಚೆಕ್ ಪೋಸ್ಟ್ ಮೂಲಕ ಪ್ರತಿದಿನ ಓಡಾಟ ನಡೆಸುವವರಿಗೆ ಹೆಚ್ಚಿನ ತಪಾಸಣೆಯಿಂದ ವಿನಾಯಿತಿ ನೀಡಬೇಕು. ಶಾಲಾ ಸಮಯದಲ್ಲಿ ಬ್ಯಾರಿ ಕೇಡ್ ಗಳನ್ನು ಸುವ್ಯವಸ್ಥಿತವಾಗಿ ಇರಿಸಬೇಕು. ಶನಿವಾರ ಭಾನುವಾರಗಳಂದು ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳ ಓಡಾಟ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅಧಿಕಗೊಳಿಸಬೇಕು ಎಂದು ಗ್ರಾಮಸ್ಥರು ಹೇಳಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಭರವಸೆ ನೀಡಿದರು.

Exit mobile version