ಅರಸಿನಮಕ್ಕಿ : ಇದೀಗ ಡಿಜಿಟಲ್ ಯುಗ. ಎಲ್ಲಿಯೂ ನೇರ ಹಣದ ವ್ಯವಹಾರವಿಲ್ಲದೆ ಜನ ವ್ಯವಹರಿಸುತ್ತಿದ್ದಾರೆ. ಆದರೆ ಇದಕ್ಕೊಂದು ಅಪವಾದ ಹತ್ಯಡ್ಕ ಗ್ರಾಮದ ಸುತ್ತಲಿನ ಜನತೆ.
ಅರಸಿನಮಕ್ಕಿ, ಶಿಶಿಲ, ಶಿಬಾಜೆ, ರೆಖ್ಯಾ , ಕಳೆಂಜ ಗ್ರಾಮದ ಜನತೆಗೆ ಇನ್ನೂ ಎ.ಟಿ.ಎಂ ವ್ಯವಹಾರದ ಅವಕಾಶ ದೊರೆತಿಲ್ಲ. ಎ.ಟಿ.ಎಂ ಹಿಡಿದುಕೊಂಡು ದೂರದ ಕೊಕ್ಕಡಕ್ಕೆ ಪ್ರಯಾಣಿಸಬೇಕಾಗುತ್ತದೆ. ಈ ಕುರಿತು ಹಲವಾರು ಬಾರಿ ಒತ್ತಾಯಿಸಿದರೂ ಇನ್ನೂ ಈ ಹಳ್ಳಿಯ ಮಂದಿ ಎ.ಟಿ.ಎಂ ಕಾರ್ಡು ಇದ್ದರೂ ಬಳಸದಂತಾಗಿದೆ.
ಮೂರು ನಾಲ್ಕು ಬ್ಯಾಂಕುಗಳಲ್ಲಿ ಸಾವಿರಾರು ರೈತರು, ಮಹಿಳೆಯರು, ವಿದ್ಯಾರ್ಥಿಗಳು ವ್ಯವಹಾರಿಸುತ್ತಿದ್ದಾರೆ. ಎ.ಟಿ.ಎಂ ಕೂಡಾ ನೀಡುತ್ತಿದ್ದರೂ ಬಳಸದಂತಾಗಿದೆ.
ಆದುದರಿಂದ ಸಂಬಂಧಿಸಿದ ಜನಪ್ರತಿನಿಧಿಗಳು, ಬ್ಯಾಂಕ್ ಅಧಿಕಾರಿಗಳು ಕೇಂದ್ರ ಸ್ಥಾನವಾದ ಅರಸಿನಮಕ್ಕಿಯಲ್ಲಿ ಒಂದು ATM ಬೂತ ಒದಗಿಸುವಂತೆ ಒತ್ತಾಯಿಸಲಾಗಿದೆ.
ಬಿ.ಜಯರಾಮ ನೆಲ್ಲಿತ್ತಾಯ ಶಿಶಿಲ.