ಮಡಂತ್ಯಾರು :ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ 2021-22ನೇ ಸಾಲಿನಲ್ಲಿ ನಡೆಸಲಾದ ಭರತನಾಟ್ಯ ಶಾಸ್ತ್ರೀಯ ನೃತ್ಯದ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ನಿಯತಿ ನೃತ್ಯನಿಕೇತನ ಮಡಂತ್ಯಾರು ಇದರ ಪ್ರಥಮ ಬ್ಯಾಚ್‌ನ ಇಬ್ಬರು ವಿದ್ಯಾರ್ಥಿನಿಯರಾದ ಕುಮಾರಿ ಭವ್ಯಾ ಮಾಣೂರು ಹಾಗೂ ಕುಮಾರಿ ಮೈಥಿಲಿ ಗೋರೆ ಅತ್ಯುತ್ತಮ ಅಂಕದೊಂದಿಗೆ ವಿಶಿಷ್ಟ ದರ್ಜೆ(ಡಿಸ್ಟಿಂಕ್ಷನ್)ಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಬೆಳ್ತಂಗಡಿ ಹಾಗೂ ವಿದುಷಿ ನಿಶಾ ಪ್ರಸಾದ್ ಮಾಣೂರು ಇವರ ಶಿಷ್ಯೆಯಾಗಿರುವ ಕುಮಾರಿ ಭವ್ಯಾ ಶ್ರೀ ಮಂಜುನಾಥ ಮಾಣೂರು ಹಾಗೂ ಶ್ರೀಮತಿ ಜ್ಯೋತಿ ದಂಪತಿಗಳ ಪುತ್ರಿ ಮತ್ತು ಮಚ್ಚಿನ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ.
ಸುಳ್ಕೇರಿ, ಕುದ್ಯಾಡಿ ಮನೆಯ ಚಂದ್ರಕಾಂತ ಗೋರೆ ಹಾಗೂ ವಿದ್ಯಾ ಗೋರೆ ದಂಪತಿಗಳ ಪುತ್ರಿಯಾಗಿರುವ ಕುಮಾರಿ ಮೈಥಿಲಿ ಗೋರೆ ಸಂತ ಪೌಲ ಆಂಗ್ಲಮಾಧ್ಯಮ ಶಾಲೆ ನಾರಾವಿ – ಇಲ್ಲಿನ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ.
ಇವರಿಗೆ ನಿಯತಿ ನೃತ್ಯನಿಕೇತನ ಮಡಂತ್ಯಾರು ಇದರ ನೃತ್ಯ ಗುರುಗಳಾದ ವಿದುಷಿ ನಿಶಾ ಪ್ರಸಾದ್ ಮಾಣೂರು ಅವರು ಮಾರ್ಗದರ್ಶನ ನೀಡಿದ್ದಾರೆ.