Site icon Suddi Belthangady

ನಮ್ಮ ಮತ ಮಾರಾಟಕ್ಕಿಲ್ಲ, ಮಲಿಯಾಲಪಲ್ಕೆಯಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್


ವೇಣೂರು: ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಹೊಸಂಗಡಿ-ಬಡಕೋಡಿ ಗ್ರಾಮದ ಪ. ಜಾತಿ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಹಂಚಿಕೆ ವಿಷಯದಲ್ಲಿ ಆಡಳಿತ ಮಂಡಳಿ ಸಂಪೂರ್ಣ ಕಡೆಗಣಿಸುತ್ತಿದೆ ಎಂದು ಆರೋಪಿಸಿ ನಮ್ಮ ಮತ ಮಾರಾಟಕ್ಕಿಲ್ಲ ಅನ್ನುವ ಬ್ಯಾನರ್‌ವೊಂದು ಪೆರಿಂಜೆ ಸಮೀಪದ ಮಲಿಯಾಲಪಲ್ಕೆ ಬಳಿ ಕಂಡು ಬಂದಿದೆ.


ಕಳೆದ 5 ವರ್ಷಗಳಿಂದ ಶಾಸಕರೂ ಕೂಡಾ ಭರವಸೆಯನ್ನು ನೀಡಿ ನಮಗೆ ನೀಡಿದ ಭರವಸೆಯನ್ನು ಈಡೇರಿಸುವವರೆಗೆ ನಮ್ಮ ಸಮುದಾಯದವರಿಂದ ಸಾಮೂಹಿಕವಾಗಿ ಚುನಾವಣಾ ಬಹಿಷ್ಕಾರ ನಡೆಸಲಾಗುವುದು. ಹೊಸಂಗಡಿಯಲ್ಲಿ ಶಾಸಕರು ಭಾಗಿಯಾಗುವ ಎಲ್ಲಾ ಕಾರ್ಯಕ್ರಮಗಳಿಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಬ್ಯಾನರ್‌ನಲ್ಲಿ ಉಲ್ಲೇಖಿಸಲಾಗಿದೆ.

Exit mobile version