Site icon Suddi Belthangady

ಕರಾಡ ಬ್ರಾಹ್ಮಣ ಸಮಾಜದಿಂದ ಸಂಸ್ಮರಣೆ ಹಾಗೂ ನುಡಿನಮನ

ಉಜಿರೆ: .ಕೀರ್ತಿಶೇಷರಾದ ಹಿರಿಯ ಭಾಗವತರಾದ  ಬಲಿಪ ನಾರಾಯಣ ಭಾಗವತರು ಹಾಗೂ ಕೀರ್ತಿಶೇಷ ಉಜಿರೆಯ ಧಣಿ ,ಧಾರ್ಮಿಕ ನೇತಾರ  ವಿಜಯ‌ರಾಘವ ಪಡ್ವೆಟ್ನಾಯರ ಸಂಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮವನ್ನು ಮಾ 15 ರಂದು ಸೋಮಂತಡ್ಕದ  “ಸಮೃದ್ಧಿ” ಕರಾಡ ಭವನ ದಲ್ಲಿ  ಬೆಳ್ತಂಗಡಿ ತಾಲೂಕಿನ  ಕರಾಡ ಬ್ರಾಹ್ಮಣ‌ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಯಿತು.                                                   

ಯಕ್ಷಗಾನದ ಧ್ರುವತಾರೆ ಕಂಚಿನ  ಕಂಠದ ಬಲಿಪ ನಾರಾಯಣ ಭಾಗವತರು ಮತ್ತು ಉಜಿರೆಯ ‌ಧಣಿಗಳು, ಧಾರ್ಮಿಕ  ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಹೆಸರುವಾಸಿಯಾದಂತಹ ಉಜಿರೆ  ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ವಿಜಯರಾಘವ ಪಡ್ವೆಟ್ನಾಯರನ್ನು ಸ್ಮರಿಸಿ ಅವರ ಸಾಧನೆಯ‌ ಬಗ್ಗೆ ಯಕ್ಷಗಾನ ಸಂಘಟಕ ಧರ್ಮಸ್ಥಳದ  ಬಿ.  ಭುಜಬಲಿ  ಮತ್ತು  ನಿವೃತ್ತ ಉಪನ್ಯಾಸಕ,ಯಕ್ಷಗಾನ ಅರ್ಥಧಾರಿ  ದಿವಾಕರ ಆಚಾರ್ಯ ಗೇರುಕಟ್ಟೆ ನುಡಿನಮನ ಸಲ್ಲಿಸಿದರು. 

ವಿಜಯ ರಾಘವ ಪಡ್ವೆಟ್ನಾಯರ ಪುತ್ರ  ಶರತ್ ಕೃಷ್ಣ ಪಡ್ವೆಟ್ನಾಯರು – ಬಲಿಪರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಹಾಗೂ ವಿಜಯ ರಾಘವ ಪಡ್ವೆಟ್ನಾಯರ ಸೇವೆ‌ ,ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ಬಲಿಪರಂತಹ‌ ಮಹಾನ್ ಚೇತನ ಮತ್ತು ಪಡ್ವೆಟ್ನಾಯರಂತಹ‌ ಮಹನೀಯರು ಸಮಾಜದ ಅನರ್ಘ್ಯ ರತ್ನಗಳೆಂದು  ಅವರ ಸಾಧನೆಯ‌ನ್ನು ಸ್ಮರಿಸಿ  ಈರ್ವರು ಕೀರ್ತಿಶೇಷರಿಗೆ ಅಕ್ಷರಾಂಜಲಿಗಳನ್ನು ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಪ್ರದೀಪ ಆಟಿಕುಕ್ಕೆ  ಸಲ್ಲಿಸಿದರು.ಕಾರ್ಯಕ್ರಮದಲ್ಲಿ  ತಾಲೂಕಿನ ಹಿರಿಯ ಕರಾಡ ಬಂಧು ,ಭಗಿನಿಯರು ಹಾಗೂ ವಿಜಯ ರಾಘವ ಪಡ್ವೆಟ್ನಾಯರು  ಮತ್ತು ಬಲಿಪ ನಾರಾಯಣ ಭಾಗವತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಮಮತಾ.ವಿ.ಭಟ್ ಸ್ವಾಗತಿಸಿ, ಕಾವ್ಯಶ್ರೀ  ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.                                                                     

ಸಂಸ್ಮರಣೆ,ನುಡಿನಮನ  ಕಾರ್ಯಕ್ರಮದ ಬಳಿಕ  ಇಬ್ಬರು ಮಹಾನ್ ಚೇತನರ ಸವಿ ನೆನಪಿಗಾಗಿ ಯಕ್ಷ ಭಾರತಿ ಕನ್ಯಾಡಿ ಇವರ ಸಂಯೋಜನೆಯಲ್ಲಿ “ಶ್ರೀ ರಾಮ ಪರಂಧಾಮ” ಯಕ್ಷಗಾನ ತಾಳಮದ್ದಳೆ ನಡೆಯಿತು.

Exit mobile version