Site icon Suddi Belthangady

ಮುಂಡಾಜೆ: ಕೂಲಿ ಕಾರ್ಮಿಕ ಮಹಿಳೆ ಕುಸಿದು ಬಿದ್ದು ಸಾವು

ಮುಂಡಾಜೆ: ಕೂಲಿ ಕೆಲಸಕ್ಕೆಂದು ಮಾ. 12ರಂದು ತೆರಳಿದ್ದ ಮಹಿಳೆಯೋರ್ವರು ಕುಸಿದು ಬಿದ್ದಿದ್ದು, ಪ್ರಜ್ಞೆ ತಪ್ಪಿದ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟಿರುವ ಘಟನೆ ಮಾ.14ರಂದು ನಡೆದಿದೆ.
ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ನಿವಾಸಿ ಪಾರ್ವತಿ(55ವ) ಮೃತಪಟ್ಟವರು. ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿಯೋರ್ವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಮಯ ಕುಸಿದು ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು.ಅವರನ್ನು ಆರೈಕೆ ಮಾಡಿ ತತ್‌ಕ್ಷಣ ಚಿಕಿತ್ಸೆಗೆ ಕಕ್ಕಿಂಜೆ ಆಸ್ಪತ್ರೆಗೆ ಕರೆದೊಯ್ದು ಬಳಿಕ ಉಜಿರೆಯ ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರು ವೆನ್ಲಾಕ್ ಆಸ್ಪತೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಪುತ್ರಿ ಪುಷ್ಪಾ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Exit mobile version