Site icon Suddi Belthangady

ಪಡ್ಡ್ಯಾರಬೆಟ್ಟ ಕ್ಷೇತ್ರ: ಜಾತ್ರಾ ಮಹೋತ್ಸವಕ್ಕೆ ಚಾಲನೆ

ವೇಣೂರು: ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಮಾ. 14ರಂದು ಚಾಲನೆ ದೊರೆಯಿತು.

ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಅಮ್ಮನವರಿಗೆ ವರಹ ಪೂಜೆ ಜರಗಿತು. ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಅವರ ಉಪಸ್ಥಿತಿಯಲ್ಲಿ ರಾತ್ರಿ ಪಡ್ಡ್ಯೋಡಿಗುತ್ತುವಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿದು ಪಡ್ಡ್ಯಾರಬೆಟ್ಟಕ್ಕೆ ಕ್ಷೇತ್ರಕ್ಕೆ ಆಗಮನವಾಯಿತು. ಕ್ಷೇತ್ರದಲ್ಲಿ ಧ್ವಜಾರೋಹಣ, ಬಲಿ, ಚೆಂಡು ಜರಗಿತು. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ರೀತಿ-ರಿವಾಜು ಕಟ್ಟು ಕಟ್ಟಳೆಗಳ ಪ್ರಕಾರ ಮಾರೂರು ಖಂಡಿಗ ವೇ|ಮೂ| ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ವಿಧಿ ವಿಧಾನಗಳು ಜರಗಿದವು. ಗುರಿಕಾರರು, ಗುತ್ತುಬರ್ಕೆಯವರು, ವಿಕಾಸ್ ಜೈನ್, ವಿಶ್ವಾಸ್ ಜೈನ್ ಹಾಗೂ ಭಕ್ತಾಧಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಾ. 17ರಂದು ಜರಗಲಿರುವ ವರ್ಷಾವಧಿ ಜಾತ್ರೋತ್ಸವದಲ್ಲಿ ಮಧ್ಯಾಹ್ನ 12ರಿಂದ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನಪೂಜೆ ಮಹಾ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ಜರಗಲಿದೆ. ಮಾ. 19ರಂದು ರಾತ್ರಿ 7ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ಜರಗಲಿದೆ.

Exit mobile version