ಬೆಳಾಲು: ನಾಗಾಂಬಿಕಾ ಸಂಜೀವಿನಿ ಮಹಿಳಾ ಒಕ್ಕೂಟ ಬೆಳಾಲು ಇದರ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಹಾಗೂ ಶಿಶಿಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಪ್ರಾಸ್ತವಿಕವಾಗಿ ಮಾತನಾಡಿ ಮಹಿಳೆಯರಾದ ನಾವು ನಮ್ಮ ಮಕ್ಕಳಿಗೆ ಯಾವ ರೀತಿ ಸಂಸ್ಕಾರವನ್ನು ಹೇಳಿ ಕೊಡಬೇಕೆಂದು ತಿಳಿಸಿದರು. ಉಜಿರೆ ಪ್ರೇರಣಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೀಲಾ, ತಾಲೂಕಿನ BEREP ವೀಣಾ, ಒಕ್ಕೂಟದ ಪದಾಧಿಕಾರಿಗಳು, MBK LCRP, ಸಖಿಗಳು, BRP ಭಾಗವಹಿಸಿದ್ದರು.
ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಅನ್ನಪೂರ್ಣ ಸಂಜೀವಿನಿ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿ ನೀಡಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. 2022-23 ನೇ ಸಾಲಿನ ರಾಜ್ಯ ಮಟ್ಟದ NRLM ನ ಉತ್ತಮ ತಾಲೂಕು MIS ಸಿಬ್ಬಂದಿ ಪ್ರಶಸ್ತಿ ಯನ್ನು ಪಡೆದಿರುವ ತಾಲೂಕಿನ ನಿತೇಶ್ ಇವರನ್ನು ಕಿರು ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿ, ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಎಲ್.ಸಿ.ಆರ್.ಪಿ ವಸಂತಿ ಕಾರ್ಯಕ್ರಮ ವನ್ನು ನಿರೂಪಿಸಿ, ಲತಾ ಸ್ವಾಗತಿಸಿ, ಎಮ್.ಬಿ.ಕೆ ಹರಿಣಾಕ್ಷಿ ಧನ್ಯವಾದವಿತ್ತರು.