Site icon Suddi Belthangady

ಪಾರೆಂಕಿ: ಶ್ರೀ ರಾಮ ನಗರ ಹಾರಬೆ ಶ್ರೀ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ

ಬೆಳ್ತಂಗಡಿ: ಪಾರೆಂಕಿ ಗ್ರಾಮದ ಶ್ರೀ ರಾಮ ನಗರ ಹಾರಬೆ ಶ್ರೀ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ ಮಾ .14 ರಂದು ಮಂಜುನಾಥ ಭಟ್ ಅಸ್ರಣ್ಣರು ಮಾಲಾಡಿ ಅಂತರ ಅವರ ಉಪಸ್ಥಿಯಲ್ಲಿ ಜರಗಿತು.

ಬೆಳಿಗ್ಗೆ ಗಣಹೋಮ, ನಾಗ ದೇವರಿಗೆ ತಂಬಿಲ ಸೇವೆ, ಸಾಯಾಂಕಾಲ ಸತ್ಯನಾರಾಯಣ ಪೂಜೆ, ವಿಧ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

ನಂತರ ದುಗಲಾಯ ದೈವ ಹಾಗೂ ಗುಳಿಗ ದೈವದ ನೇಮೋತ್ಸವ ನಡೆಯಿತು. ಹಾರಬೆ ಶ್ರೀ ದುಗಲಾಯ ನೇಮೋತ್ಸವ ಸಮಿತಿ ಪಧಾದಿಕಾರಿಗಳು ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.

Exit mobile version