Site icon Suddi Belthangady

ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಇದರ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಇಂದಬೆಟ್ಟು : ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಇದರ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಂದಬೆಟ್ಟು ಸಂತ ಫಾನ್ಸಿಸ್ ಸಾವೆರಾ ಚರ್ಚ್ ಸಭಾಂಗಣದಲ್ಲಿ ಮಾ.12ರಂದು ಆಚರಿಸಲಾಯಿತು. ಇಂದಬೆಟ್ಟು ಚರ್ಚಿನ ಮುಖ್ಯಗುರುಗಳಾದ ವಂ| ಫಾ| ಸ್ಟೀವನ್ ಡಿಸೋಜರವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶ್ರೀಮತಿ ಶಾಂತಿ ವಾಸ್‌ರವರ ನೇತೃತ್ವದಲ್ಲಿ ಕ್ರೀಡಾಕೂಟಗಳು ಜರುಗಿದವು.


ವೇದಿಕೆಯಲ್ಲಿ ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಅಧ್ಯಕ್ಷೆ ಶ್ರೀಮತಿ ಗ್ರೇಸಿ ಲೋಬೊ, ಮುಖ್ಯ ಅತಿಥಿಯಾಗಿ ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ನಿರ್ದೇಶಕರಾದ ವಂ| ಫಾ| ಜೇಮ್ಸ್ ಡಿ’ಸೋಜ, ಬೆಳ್ತಂಗಡಿ ಚರ್ಚ್ ಪ್ರಧಾನ ಗುರುಗಳಾದ ವಂ| ಫಾ| ಜೋಸೆಫ್ ಕರ್ಡೋಜ, ಇಂದಬೆಟ್ಟು ಚರ್ಚ್ ಉಪಾಧ್ಯಕ್ಷರುಗಳಾದ ವಿನ್ಸೆಂಟ್ ಡಿ’ಸೋಜ, ಫೆಡ್ರಿಕ್ ರೊಡ್ರಿಗಸ್, ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಕಾರ್ಯದರ್ಶಿ ಶ್ರೀಮತಿ ಅಶು ಜುಲಿಯೇಟ್ ಕ್ರಾಸ್ತಾ ಹಾಗೂ ಧರ್ಮ ಭಗಿನಿಯರು ಉಪಸ್ಥಿತರಿದ್ದರು.


ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಬಹುಮಾನ ವಿತರಣೆ ನಡೆಯಿತು. 400ಕ್ಕೂ ಹೆಚ್ಚು ಕಥೋಲಿಕ್ ಸ್ತ್ರೀಯರು ಭಾಗಿಯಾಗಿದ್ದರು. ಅಧ್ಯಕ್ಷೆ ಶ್ರೀಮತಿ ಗ್ರೇಸಿ ಲೋಬೊ ಪ್ರಾಸ್ತವಿಕ ನುಡಿಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಅಶು ಜುಲಿಯೇಟ್ ಕ್ರಾಸ್ತಾ ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀಮತಿ ಲೀನಾ ಕ್ರಾಸ್ತಾ ಅರ‍್ವಾ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಜೆತ್ರುಡ್ ಡಿ’ಸೋಜ ವಂದಿಸಿದರು.

Exit mobile version