Site icon Suddi Belthangady

ಪುಂಜಾಲಕಟ್ಟೆ: ನಿವೃತ್ತ ಮುಖ್ಯ ಶಿಕ್ಷಕ ರವಿರಾಜ ಬಂಗೇರ ನಿಧನ

ಪುಂಜಾಲಕಟ್ಟೆ: ಇಲ್ಲಿಯ ಪಿಲಾತಬೆಟ್ಟು ಗ್ರಾಮದ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕ ರವಿರಾಜ ಬಂಗೇರ ಅವರು ಅಸೌಖ್ಯದಿಂದ ಮಾ.14 ರಂದು ಸ್ವಗೃಹ ದಲ್ಲಿ ನಿಧನರಾಗಿದ್ದಾರೆ.

ಮೃತರು ಆದರ್ಶ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ವಿವಿಧ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದರು ಹಾಗೂ ಉತ್ತಮ ರಂಗಭೂಮಿ ಕಲಾವಿದರಾಗಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದವರು ಹಾಗೂ ಶ್ರೀ ಬಸವೇಶ್ವರ ದೇವಾಲಯ ಬಸವನಗುಡಿ ಇದರ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದರು, ಪುಂಜಾಲಕಟ್ಟೆ ಶ್ರೀ ಮುರುಘಂದ್ರ ಮಿತ್ರ ಮಂಡಳಿ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

Exit mobile version