ನೆರಿಯ: ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ ಹಾಗೂ ಸೈಂಟ್ ತೋಮಸ್ ಚರ್ಚ್ ಗಂಡಿಬಾಗಿಲು ಇವುಗಳ ನೇತೃತ್ವದಲ್ಲಿ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ, ಸಮುದಾಯ ದಂತ ವಿಭಾಗ ಯೆನಪೋಯ ದಂತ ಕಾಲೇಜು ಹಾಗೂ ಆಸ್ಪತ್ರೆ ದೇರಳಕಟ್ಟೆ, ಸ್ಪಂದನಾ ಪಾಲಿಕ್ಲಿನಿಕ್ & ಲ್ಯಾಬೋರೇಟರಿ ಬೆಳ್ತಂಗಡಿ ಇವುಗಳ ಸಹಕಾರದಿಂದ ಗಂಡಿಬಾಗಿಲಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗಂಡಿಬಾಗಿಲಿನ ಸೈಂಟ್ ತೋಮಸ್ ಚರ್ಚ್ ಸಭಾಂಗಣದಲ್ಲಿ ಮಾ.19 ರಂದು ಪೂರ್ವಾಹ್ನ 10.00 ಗಂಟೆಯಿಂದ 1.00 ರವರೆಗೆ ಉಚಿತ ದಂತ ತಪಾಸಣೆ, ಚಿಕಿತ್ಸೆ ಹಾಗೂ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಶಿಬಿರದ ಆಯೋಜಕರು ತಿಳಿಸಿದ್ದಾರೆ.